Site icon Suddi Belthangady

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಹಿನ್ನೆಲೆ – ಸಹಕಾರ ಭಾರತೀ ಅಭ್ಯರ್ಥಿಗಳ ಘೋಷಣೆ

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-30 ರ ಸಾಲಿನ ಆಡಳಿತ ಮಂಡಳಿ ಚುನಾವಣೆ ಜ. 27 ರಂದು ನಡೆಯಲಿದ್ದು, ಜ. 5 ರಂದು ಬಡೆಕಾಯಿಲ್ ಉಮೇಶ್ ಗೌಡರ ಮನೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಸಹಮತಹದಿಂದ ಆಯ್ಕೆ ಮಾಡಿ ಘೋಷಿಸಲಾಯಿತು.

ಪಟ್ರಮೆ ಶಕ್ತಿ ಕೇಂದ್ರ ಪ್ರಮುಖ್ ಮನೋಜ್ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಲ ಪ್ರಭಾರಿ ಪ್ರೀತಮ್. ಡಿ. ಧರ್ಮಸ್ಥಳ, ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕರು ಕೊಕ್ಕಡ, ಸಿ. ಎ. ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷರು ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಕ್ ಪ್ರಶಾಂತ್ ಪೂವಾಜೆ, ಎಸ್. ಟಿ. ಮೋರ್ಚಾ ಪ್ರಧಾನ
ಕಾರ್ಯದರ್ಶಿ ವಿಠಲ್ ಕುರ್ಲೆ, ಮಂಡಲ ಸ್ತರದ ಪ್ರಮುಖರು ಬೂತ್ ಅಧ್ಯಕ್ಷರುಗಳಾದ ಕಿರಣ್, ಶಶಿ ಕುಮಾರ್, ಲಿಂಗಪ್ಪ ಗೌಡ, ಕಮಲಾಕ್ಷ ಗುಂಡಿಲೇ, ಕಾರ್ಯದರ್ಶಿಗಳದ ರವಿಚಂದ್ರ, ಶ್ರೀಧರ್ ಡಿ. ಕೆ. ಕಿಶೋರ್ ಪೋಯ್ಯೋಲೆ ಮತ್ತು ಕೊಕ್ಕಡ ಪಟ್ರಮೆ ಕಾರ್ಯಕರ್ತರ ಸಮ್ಮುಖದಲ್ಲಿ ಬೆಳ್ತಂಗಡಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಳಂಬಿಲ ಸಹಕಾರ ಭಾರತಿಯ 12 ಅಭ್ಯರ್ಥಿಗಳ ಹೆಸರನ್ನು ಘೋಷಿಸಿಸುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅಭ್ಯರ್ಥಿಗಳ ವಿವರ ಕುಶಾಲಪ್ಪ ಗೌಡ ಪೂವಾಜೆ, ವಿಠಲ್ ಬಂಡಾರಿ, ವಿಶ್ವನಾಥ್ ಕಕ್ಕುದೊಲಿ, ಪದ್ಮಾನಾಭ ಕೈಲ, ಪ್ರೇಮಾವತಿ ಕಲ್ಲಾಜೆ, ಶ್ರೀನಾಥ್ ಬಡೆಕಾಯಿಲ್, ಸುನಿಲ್ ಕೊಲ್ಲಾಜೆ, ಉದಯ್ ರಾವ್ ಅನಾರ್, ಮಹಾಬಲ ಶೆಟ್ಟಿ, ಅಶ್ವಿನಿ ರವಿ ನಾಯ್ಕ್ ಓಣಿತ್ತಾರ್, ಮುತ್ತಪ್ಪ ಕೊಕ್ಕಡ, ರವಿಚಂದ್ರ ಪುಡಿಕೆತ್ತೂರ್ ಮುಂತಾದ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ.

Exit mobile version