Site icon Suddi Belthangady

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ – ಸಹಕಾರ ಭಾರತಿ ಅಭ್ಯರ್ಥಿಗಳ ಪರ ಅರುಣ್ ಪುತ್ತಿಲ ಭರ್ಜರಿ ಪ್ರಚಾರ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಜ. 08 ರಂದು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅರಸಿನಮಕ್ಕಿಯಲ್ಲಿ ನಡೆಯಲಿದೆ.

ಈಗಾಗಲೇ ಎಲ್ಲಾ ಅಭ್ಯರ್ಥಿಗಳು ಮನೆಮನೆ ಭೇಟಿ ನೀಡಿ ಪ್ರಚಾರವನ್ನು ನಡೆಸುತ್ತಿದ್ದು, ಆ ಪ್ರಯುಕ್ತ ಜ. 05 ರಂದು ಸಹಕಾರ ಭಾರತೀ ಅಭ್ಯರ್ಥಿಗಳ ಪರ ಪುತ್ತೂರಿನ ಹಿಂದು ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಸಾರ್ವಜನಿಕ ಪ್ರದೇಶಗಳಲ್ಲಿ ಮತಯಾಚನೆ ನಡೆಸಿ ಸಹಕಾರಿ ಭಾರತೀಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ರಾಘವೇಂದ್ರ ನಾಯಕ್, ಕೈಕುರೆ ಮಂಜುನಾಥಗೌಡ, ಜಯರಾಮ್ ನೆಲ್ಲಿತ್ತಾಯ, ಕರುಣಾಕರ ಶಿಶಿಲ, ಕೃಷ್ಣಪ್ಪ ಗೌಡ ಬೆಂಗಳ, ಗಣೇಶ್ ಕೆ., ಹೊಸ್ತೋಟ, ಹಾಗೂ ಅಭ್ಯರ್ಥಿಗಳು ಜೊತೆಗಿದ್ದರು.

ಮತದಾರರ ಮನೆ ಮನೆಗೆ ಅಭ್ಯರ್ಥಿಗಳ ಚಿಹ್ನೆಯನ್ನು ಆಟೋ ರಿಕ್ಷಾದ ಮೂಲಕ ತಲುಪಿಸುವ ಕಾರ್ಯವು ನಡೆಯಿತು.

Exit mobile version