Site icon Suddi Belthangady

ಬುರೂಜ್ ಶಾಲಾ ತಂಡಕ್ಕೆ ಕರಾಟೆ ಚಾಂಪಿಯನ್ ಶಿಪ್ ಪ್ರಶಸ್ತಿ

ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೂಡುಪಡುಕೋಡಿಯ ವಿದ್ಯಾರ್ಥಿಗಳು ಸೋರಿನ್ ರಿಯು ಕರಾಟೆ ಅಸೋಸಿಯೇಷನ್ (ರಿ) ಇದರ ವತಿಯಿಂದ 7 ನೇ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ 2024 ಕರಾಟೆ ಸ್ಪರ್ಧೆಯು ಸಿ. ವಿ. ಸಿ ಹಾಲ್ ಚರ್ಚ್ ರೋಡ್ ಬೆಳ್ತಂಗಡಿ ದ. ಕ. ಇಲ್ಲಿ ನಡೆದ ಕರಾಟೆಯಲ್ಲಿ ಭಾಗವಹಿಸಿ ಕುಮಿಟೆ ವಿಭಾಗದಲ್ಲಿ 6 ಪ್ರಥಮ, 6 ದ್ವಿತೀಯ, 13 ತೃತೀಯ, ಕಟಾ ವಿಭಾಗದಲ್ಲಿ 1 ಪ್ರಥಮ, 6 ದ್ವಿತೀಯ, 8 ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 40 ಪ್ರಶಸ್ತಿ ಬುರೂಜ್ ಶಾಲೆಗೆ ಲಭಿಸಿದೆ.

ಮೊಹಮ್ಮದ್ ಹುಸೈನ್, ಅಬ್ದುಲ್ ಸಲಾಂ, ಸ್ಪೂರ್ತಿ, ಶಹನಾ ಶಂಸುನ್, ಮೊಹಮ್ಮದ್ ರಿಹಾನ್, ಮೊಹಮ್ಮದ್ ಶಹಾನ್, ಪ್ರಾಪ್ತಿ ಜೆ. ಶೆಟ್ಟಿ, ವಂಶಿಕ್, ಫಾತಿಮಾ ಫಾಹಿಮ, ಸ್ಪೂರ್ತಿ ಮಾಲತೇಶ ಜಾದರ್, ಪ್ರಣೀತ್ ಜೆ. ಶೆಟ್ಟಿ, ಹೇಮಂತ್ ಆರ್. ನಾಯಕ್, ಯಶ್ವಿತ್, ಧೃತಿ, ಆತ್ಮಿ ಶೆಟ್ಟಿ, ಪ್ರೀಯೋನ ಡಿಯೋರ ಪಿಂಟೋ, ಅರ್ಮಾನ್, ಪಿ. ಭವಿಷ್, ಮೊಹಮ್ಮದ್ ರಾಝಿಕ್, ಫಾತಿಮಾ ರಾಬಿಯ ಹಯಾ, ಶೇಖ್ ಮೊಹಮ್ಮದ್ ರಝಾನ್, ಅಫ್ರಾ ರಿಂಷಾ, ಅಮನ್, ಮೊಹಮ್ಮದ್ ಸಾಬಿಕ್ ಯೂಸುಫ್, ಅಬ್ದುಸುಬಾಹನ್, ರಿಹಾಮ್ ಫಾತಿಮಾ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ ಶಿಕ್ಷಕರು ಸಂಚಾಲಕರು ಅಭಿನಂದಿಸಿದ್ದಾರೆ. ಖ್ಯಾತ ಕರಾಟೆ ಪಟು ಮೊಹಮ್ಮದ್ ನದೀಂ ತರಬೇತಿ ನೀಡಿರುತ್ತಾರೆ.

Exit mobile version