Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – “ವಾತ್ಸಲ್ಯ ಕಾರ್ಯಕ್ರಮ ದಡಿಯಲ್ಲಿ ವಾತ್ಸಲ್ಯ ಕಿಟ್” ವಿತರಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೇಮಾವತಿ ಹೆಗ್ಗಡೆ ತೀರ ಅಸಹಾಯಕರಿಗೆ ಹಮ್ಮಿಕೊಂಡತಹ ಕನಸಿನ ಯೋಜನೆಯಾದ “ವಾತ್ಸಲ್ಯ ಕಾರ್ಯಕ್ರಮ ದಡಿಯಲ್ಲಿ ವಾತ್ಸಲ್ಯ ಕಿಟ್”ನ್ನು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಸ ಸಮನ್ವಯ ಅಧಿಕಾರಿ ಮಧುರ ಮೇಡಂ, ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ರೈ ಹಾಗೂ “ಶ್ರೀ ಸತ್ಯನಾರಾಯಣ ಭಜನಮಂಡಳಿ ನೀರಪಾದೆ”ಯ ಹಿರಿಯ ಸದಸ್ಯ ಮಹಾಲಿಂಗ ಗೌಡರ ಉಪಸ್ಥಿತಿಯಲ್ಲಿ ವಾತ್ಸಲ್ಯ ಸದಸ್ಯರಾದ ಕೈರೋಳಿ ರತ್ನ, ರಾಮ ಎಮ್. ಕೆ ದಂಪತಿಗೆ ವಿತರಿಸಲಾಯಿತು . ಬರಂಗಾಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅಶಾಲತ ಪಾಲ್ಗೊಂಡಿದ್ದರು.

Exit mobile version