Site icon Suddi Belthangady

ಸಾಲು ಮರದ ತಿಮ್ಮಕ್ಕ” ಟ್ರಿ ಪಾರ್ಕ್” ಸೂಚನಾ ಫಲಕ ಅಳವಡಿಕೆ

ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಪ್ರವಾಸಿ ಉದ್ಯಾನವನದಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನಕ್ಕೆ ಸರ್ಕಾರದಿಂದ ಸೂಚನಾ ಫಲಕವನ್ನು ಅಳವಡಿಸಿದೆ.

ಕರ್ನಾಟಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಮಂಗಳೂರು ವಿಭಾಗದ ಉದ್ಯಾನವನ ಇದಾಗಿದ್ದು, ಪ್ರವಾಸಿಗರು ಉದ್ಯಾನವನದ ಒಳ ಪ್ರವೇಶಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯ ಮತ್ತು ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ1 ರವರೆಗೆ ಹಾಗೂ ಅಪರಾಹ್ನ 2 ರಿಂದ 5 ರವರೆಗೆ ಎಂದು ಸೂಚನಪಾಲಕವನ್ನು ಉದ್ಯಾನವನದ ಹೊರಭಾಗದಲ್ಲಿ ಅಳವಡಿಸಲಾಗಿದೆ.

ಸರ್ಕಾರದ ಈ ಎಲ್ಲ ಮುಂಜಾಗ್ರತೆ ಕ್ರಮಗಳು ಉತ್ತಮ ನಿರ್ಧಾರವಾಗಿದೆ. ಉದ್ಘಾಟನೆಗೊಂಡ ನಂತರ ಉದ್ಯಾನವನದ ಕೆಲಸ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ವೃಕ್ಷೋದ್ಯಾನವನಕ್ಕೆ ಬರುವ ರಸ್ತೆ ಜಲ್ಲಿ ಕಲ್ಲುಗಳಿಂದ ಕೂಡಿದ್ದು ತುಂಬಾ ಕಷ್ಟಕರವಾಗಿ ಇದನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

Exit mobile version