ಬೆಳ್ತಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಂಚಾರಿ ವಿಭಾಗದ ಉಪ ನಿರೀಕ್ಷಕ ದೇವಪ್ಪ ಎಂ. ಡಿ. 31 ರಂದು ಸೇವಾ ನಿವೃತ್ತಿ ಹೊಂದಿದರು. ಇವರು ಬೆಳ್ತಂಗಡಿಯಿಂದ ಕಳೆದ 6 ತಿಂಗಳ ಹಿಂದೆ ಎಸ್. ಐ. ಆಗಿ ಭಡ್ತಿಗೊಂಡು ಉಪ್ಪಿನಂಗಡಿ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದರು.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಲ್ಕೂವರೆ ವರ್ಷಗಳಿಂದ ಸಹಾಯಕ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 31 ವರ್ಷಗಳಿಂದ ಮಂಗಳೂರು ಪಾಂಡೇಶ್ವರ, ಉಪ್ಪಿನಂಗಡಿ, ಮೂಡಬಿದಿರೆ, ಪುಂಜಾಲಕಟ್ಟೆ, ಬಂಟ್ವಾಳ ಗ್ರಾಮಾಂತರ, ವೇಣೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ ವೃತ್ತ ನಿರೀಕ್ಷರ ಕಚೇರಿಯಲ್ಲಿ 3 ವರ್ಷ, ಬಳಿಕ ನಾಲ್ಕೂವರೆ ವರ್ಷ ಬೆಳ್ತಂಗಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಳಾಲಿನ ಇವರು ಪ್ರಸ್ತುತ ಕನ್ಯಾಡಿಯಲ್ಲಿ ಕುಟುಂಬ ಸಹಿತ ವಾಸವಾಗಿದ್ದಾರೆ.
ಮಂಗಳೂರು ಎಸ್.ಪಿ. ಕಛೇರಿ, ಉಪ್ಪಿನಂಗಡಿ ಪೊಲೀಸ್ ಠಾಣೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೀಳ್ಕೋಡುಗೆ ಸಮಾರಂಭ ನಡೆಯಿತು.