ಧರ್ಮಸ್ಥಳ: ಸುಮಾರು 45 – 50 ವರ್ಷ ಪ್ರಾಯದ ಅಪರಿಚಿತ ಗಂಡಸು ಧರ್ಮಸ್ಥಳದ ಮಾಹಿತಿ ಕಛೇರಿ ಬಳಿಯಿರುವ ಹಳೇ ಬಸ್ಸು ತಂಗುದಾಣದ ಬಳಿ ಜ. 02 ರಂದು ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಚಿಕಿತ್ಸೆಯಲ್ಲಿದವರು ಜ. 03 ರಂದು ಮೃತಪಟ್ಟಿದ್ದು, ಮೃತದೇಹವನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ.