Site icon Suddi Belthangady

ವಿಘ್ನೇಶ್ ಬಿಲ್ಡಿಂಗ್ ಎದುರು ಚರಂಡಿ ತೆರೆದು ತೊಂದರೆ ಪಟ್ಟಣ ಪಂಚಾಯತ್‌ಗೂ ಬಾಡಿಗೆದಾರರಿಗೂ ಜಟಾಪಟಿ

ಬೆಳ್ತಂಗಡಿ: ಚರಂಡಿಯ ಸ್ಲಾಬ್ ತೆಗೆದು ಶುಚಿಗೊಳಿಸಲಾಗಿದೆ. ಅಕ್ಕಪಕ್ಕದಲ್ಲಿದ್ದ ಇಂಟರ್‌ಲಾಕ್ ತೆಗೆಯಲಾಗಿದೆ. ಪಟ್ಟಣ ಪಂಚಾಯತ್ ಆಡಳಿತ ವ್ಯವಸ್ಥೆ ಚರಂಡಿ ಓಪನ್ ಮಾಡಿ ಸ್ವಚ್ಛಗೊಳಿಸಿದೆ. ಚರಂಡಿ ಮುಚ್ಚದೆ ಹಾಗೇ ಬಿಟ್ಟಿದೆ. ಚರಂಡಿ ಮುಚ್ಚುವುದು ನಮ್ಮ ಕೆಲಸವಲ್ಲ. ಅದನ್ನು ಕಟ್ಟಡ ಮಾಲಕರೇ ಮಾಡಬೇಕು ಎಂದು ಪಟ್ಟಣ ಪಂಚಾಯತ್ ಹೇಳುತ್ತಿದೆ. ಇದು ನಮ್ಮ ಕೆಲಸವಲ್ಲ. ನಮಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಪಟ್ಟಣ ಪಂಚಾಯತ್‌ನ ಜವಾಬ್ದಾರಿ ಎಂದು ಅಂಗಡಿ ಮಾಲಕರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಪಟ್ಟಣ ಪಂಚಾಯತ್ ಹಾಗೂ ಕಟ್ಟಡದಲ್ಲಿರುವ ಬಾಡಿಗೆದಾರರ ನಡುವಿನ ಜಟಾಪಟಿ ತೀವ್ರಗೊಂಡಿದೆ. ಅಂಗಡಿ ಮಾಲಕರು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಪಂಚಾಯತ್ ಕಚೇರಿಗೆ ಹೋಗಿ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆಯೂ ನಡೆದಿದೆ. ಹೀಗೆ ಬೆಳ್ತಂಗಡಿಯ ವಿಘ್ನೇಶ್ ಸಿಟಿ ಕಟ್ಟಡ ಸಮೀಪದ ತೆರೆದ ಚರಂಡಿ ವಿಚಾರ ಈಗ ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ವಿಘ್ನೇಶ್ ಸಿಟಿ ಕಟ್ಟಡ ಮುಂಭಾಗ ಅವ್ಯವಸ್ಥೆ; ವಿಘ್ನೇಶ್ ಸಿಟಿ ಕಟ್ಟಡ ಬೆಳ್ತಂಗಡಿಯ ಮಿನಿ ವಿಧಾನಸೌಧದ ಪಕ್ಕದಲ್ಲಿದೆ. ಪಕ್ಕದ ಕೋರ್ಟ್ ರಸ್ತೆಯಲ್ಲಿ ಈ ಜಾಗ ಇದೆ. ಈ ಕಟ್ಟಡದಲ್ಲಿ ಮಿನಿ ಹೋಟೆಲ್, ಜೆರಾಕ್ಸ್ ಅಂಗಡಿ ಇದೆ. ಮತ್ತು ದಸ್ತಾವೇಜು ಬರಹಗಾರರು, ವಕೀಲರುಗಳ ಕಚೇರಿ, ಪತ್ರಕರ್ತರ ಸಂಘದ ಕಚೇರಿ, ಸರ್ಕಾರಿ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈಗ ಆ ಕಟ್ಟಡ ಮುಂಭಾಗದ ಚರಂಡಿಯನ್ನು ಪಟ್ಟಣ ಪಂಚಾಯತ್‌ನವರು ತೆರೆದು ಸ್ವಚ್ಛಗೊಳಿಸಿದ್ದಾರೆ. ಇದಾದ ನಂತರ ಚರಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಇದು ಸಾರ್ವಜನಿಕರು ಮತ್ತು ಕಟ್ಟಡದಲ್ಲಿರುವ ಅಂಗಡಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಸ್ಯೆ ಶುರುವಾಗಿ 10 ದಿನ ಕಳೆದರೂ ಚರ್ಚೆ ಮಾತ್ರ-ಅವ್ಯವಸ್ಥೆ ಸರಿಯಾಗಿಲ್ಲ: ವಿಘ್ನೇಶ್ ಸಿಟಿ ಕಟ್ಟಡದ ಮುಂಭಾಗ ಅಗೆದು ಹಾಕಿದ್ದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಮಿನಿ ವಿಧಾನಸೌಧಕ್ಕೆ, ಕೋರ್ಟ್‌ಗೆ, ಪಟ್ಟಣ ಪಂಚಾಯತ್, ತಾಲೂಕು ಪಂಚಾಯತ್ ಕಚೇರಿಗೆ ಮುಂತಾದೆಡೆಗೆ ಹೋಗುವ ವಾಹನ ಸವಾರರು, ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಉಂಟಾಗಿ ವಾರ ಕಳೆದು 10 ದಿನವಾಗುತ್ತಾ ಬಂದರೂ ಪಟ್ಟಣ ಪಂಚಾಯತ್ ಕ್ಯಾರೇ ಎನ್ನುತ್ತಿಲ್ಲ. ಕಟ್ಟಡ ಮಾಲೀಕರು ಕೂಡ ಅದನ್ನು ಸರಿಪಡಿಸಲು ಮುಂದಾಗುತ್ತಿಲ್ಲ.
ಪಟ್ಟಣ ಪಂಚಾಯತ್‌ನಿಂದ ಮುಚ್ಚುವುದಿಲ್ಲ ಎಂಬ ನಿರ್ಧಾರ: ವಿಘ್ನೇಶ್ ಸಿಟಿ ಕಟ್ಟಡದ ಮುಂಭಾಗ ಚರಂಡಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯವನ್ನು ಜಯಾನಂದ ಗೌಡರ ಅಧ್ಯಕ್ಷತೆಯ ಪಟ್ಟಣ ಪಂಚಾಯತ್ ಮಾಡಿದೆ. ಆದರೆ ಅದನ್ನು ಮುಚ್ಚುವ ಕೆಲಸವನ್ನು ಕಟ್ಟಡದ ಮಾಲೀಕರು ಮಾಡಬೇಕು. ಯಾಕಂದ್ರೆ ಅದು ಅವರ ಜವಾಬ್ದಾರಿ, ಅದು ಪಟ್ಟಣ ಪಂಚಾಯತ್‌ನ ಕರ್ತವ್ಯ ಅಲ್ಲ

ಎಂದು ಪಟ್ಟಣ ಪಂಚಾಯತ್ ತನ್ನ ಸಭೆಯಲ್ಲಿ ನಿರ್ಧರಿಸಿದೆ. ಆದ್ದರಿಂದ ಈಗ ಚರಂಡಿಯನ್ನು ಕಟ್ಟಡದ ಮಾಲೀಕರು ಮುಚ್ಚಬೇಕಾಗಿದೆ. ಅಥವಾ ಇನ್ನೂ ಕೂಡ ನೀನಾ ನಾನಾ ಎಂದು ಪೈಪೋಟಿ ಶುರುವಾಗುತ್ತಾ ಕಾದು ನೋಡಬೇಕಿದೆ.

ಅಂಗಡಿ ಮಾಲೀಕರು, ಬಾಡಿಗೆದಾರರು ಹಾಗೂ ಸಾರ್ವಜನಿಕರಿಂದ ಪಟ್ಟಣ ಪಂಚಾಯತ್ ಗೆ ಮನವಿ:
ಕಟ್ಟಡದಲ್ಲಿರುವ ವಕೀಲರಾದ ಕ್ಸೇವಿಯರ್ ಪಾಲೇಲಿ, ಸಂತೋಷ್ ಕುಮಾರ್, ಶೈಲೇಶ್ ಆರ್. ಠೋಸರ್, ಶ್ರೀನಿವಾಸ ಗೌಡ ಮತ್ತಿತರರು ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ಚರಂಡಿ ಅವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ವ್ಯವಸ್ಥೆ ಸರಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಅಶೋಕ್, ಸಂಜೀವ ಆರ್, ಅರ್ಜಿ ಬರಹ ಗಾರರಾದ ಶಿವಾನಂದ, ಭಗತ್ ರಾಮ್, ಅಣ್ಣು ಶೆಟ್ಟಿ, ಶರೀಫ್ ಉಪಸ್ಥಿತರಿದ್ದರು.

ಪಟ್ಟಣ ಪಂಚಾಯತ್‌ಗೆ ಮನವಿ: ಕಟ್ಟಡದಲ್ಲಿರುವ ವಕೀಲರಾದ ಕ್ಸೇವಿಯರ್ ಪಾಲೇಲಿ, ಸಂತೋಷ್ ಕುಮಾರ್, ಶೈಲೇಶ್ ಆರ್. ಠೋಸರ್, ಶ್ರೀನಿವಾಸ ಗೌಡ ಮತ್ತಿತರರು ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ಚರಂಡಿ ಅವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ವ್ಯವಸ್ಥೆ ಸರಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಅಶೋಕ್, ಸಂಜೀವ ಆರ್, ಅರ್ಜಿ ಬರಹಗಾರರಾದ ಶಿವಾನಂದ, ಭಗತ್ ರಾಮ್, ಅಣ್ಣು ಶೆಟ್ಟಿ, ಪೂವಪ್ಪ ಭಂಡಾರಿ, ಶರೀಫ್ ಉಪಸ್ಥಿತರಿದ್ದರು.

ನಾವು ಚರಂಡಿ ಮುಚ್ಚುವುದಿಲ್ಲ ಅದು ಕಟ್ಟಡ ಮಾಲಕರದ್ದೇ ಜವಾಬ್ದಾರಿ: ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ನಾವು ಚರಂಡಿ ಮುಚ್ಚುವುದಿಲ್ಲ. ಅದು ಕಟ್ಟಡದ ಮಾಲಕರದ್ದೇ ಜವಾಬ್ದಾರಿ ಎಂದು ಹೇಳಿದ್ದಾರೆ. ವಿಘ್ನೇಶ್ ಬಿಲ್ಡಿಂಗ್‌ನಲ್ಲಿ ಹಾಸ್ಟೆಲ್‌ನಿಂದ ಮಕ್ಕಳ ಪ್ಯಾಂಪರ್ಸ್ ಎಲ್ಲಾ ಚರಂಡಿಗೆ ಹಾಕಿ ತೊಂದರೆಯಾಗಿತ್ತು. ಈ ಸಲ ಸಭೆಯಲ್ಲಿ ನಿರ್ಣಯ ಮಾಡಿ ಚರಂಡಿಯ ಸ್ಲಾಬ್ ತೆಗೆಸಿದ್ದೇವೆ. ಅಷ್ಟು ದೊಡ್ಡ ಕಟ್ಟಡಕ್ಕೆ ಪಾಕಿಂಗ್ ವ್ಯವಸ್ಥೆ ಬೇಕು. ಇಲ್ಲದಿದ್ದರೆ ಪಂಚಾಯತ್‌ನಿಂದ ಅನುಮತಿ ನೀಡುವುದಿಲ್ಲ.

ವಿಘ್ನೇಶ್ ಬಿಲ್ಡಿಂಗ್‌ನ ಪಾಕಿಂಗ್ ವ್ಯವಸ್ಥೆ ತೋರಿಸಿಕೊಡಲಿ. ಕಟ್ಟಡದಲ್ಲಿ ಬಾಡಿಗೆ ಇರುವವರು ಪಟ್ಟಣ ಪಂಚಾಯತ್‌ಗೆ ಬಂದು ಅಧಿಕಾರಿಗಳ ಮೇಲೆ ಸ್ವಲ್ಪ ಗದರಿಸಿ, ಉದ್ಧಟನತನದಿಂದ ಮಾತಾಡಿದ್ದಾರೆ. ಅದು ಬೇಸರ ತರುತ್ತದೆ. ಮುಂಚಿತವಾಗಿ ತಿಳಿಸದೆ ಏಕಾಏಕಿ ಬಂದು ತೊಂದರೆ ಕೊಟ್ಟಿದ್ದೇವೆ ಅಂದ್ರೆ ಹೇಗೆ. ನಾವು ತೊಂದರೆ ಕೊಟ್ಟಿಲ್ಲ. ತೊಂದರೆ ಆದರೆ ಅವರು ಮಾಲಕರಲ್ಲಿ ಕೇಳಬೇಕು. ಪಂಚಾಯತ್‌ನಲ್ಲಿ ಕೇಳುವುದಲ್ಲ. ವಿಘ್ನೇಶ್ ಬಿಲ್ಡಿಂಗ್‌ನ ಪಾಕಿಂಗ್ ಎಲ್ಲಿ ಅಂತ ಗುರುತಿ ಸಿಕೊಡುವಂತೆ ನಾವು ಡಿ.ಸಿ.ಗೆ ಮನವಿ ಮಾಡುತ್ತೇವೆ. ನಮ್ಮ ಪಟ್ಟಣ ಪಂಚಾಯತ್‌ನ ಕಡತದಲ್ಲಿ ಯಾರ ಹೆಸರಿದೆ ಅವರಿಗೆ ನೋಟೀಸ್ ಕೊಟ್ಟಿದ್ದೇವೆ. ನಮ್ಮಲ್ಲಿ ಖಾತೆ ಬದಲಾವಣೆ ಆಗಿಲ್ಲ. ಆದ್ದರಿಂದ ಕಟ್ಟಡ ಮಾಲೀಕರಿಗೆ ನೋಟೀಸ್ ಮಾಡುತ್ತಲೇ ಇದ್ದೇವೆ. ಆ ಕಟ್ಟಡದಲ್ಲಿ ಲಿಫ್ಟ್ ಇಲ್ಲ. ಇತ್ತೀಚಿಗೆ ಯಾರೋ ಬಿದ್ದರೂ ಅನ್ನುವ ಮಾಹಿತಿಯಿದೆ. ಅಂಗವಿಕಲರು ಹೋಗಲು ಲಿಫ್ಟ್ ಇಲ್ಲ. ಇಂಗುಗುಂಡಿಯೂ ಮಾಡಿಲ್ಲ. ಆ ತೆರಿಗೆ ಕಲೆಕ್ಷನ್ ಮಾಡುವುದು ಸರ್ಕಾರದ ಕರ್ತವ್ಯ, ಸರ್ಕಾರಕ್ಕೆ ಆ ಮೊತ್ತ ಹೋಗುತ್ತದೆ, ಇವರು ತೆರಿಗೆ ಕೊಡಲೇ ಬೇಕು, ತೆರಿಗೆ ಬಾಕಿಯಿಟ್ಟಿದ್ದರೂ ಅದನ್ನು ಈಗ ಬೇರೆ ಯಾರೋ ತೆಗೆದುಕೊಂಡವರು ಕೊಟ್ಟಿದ್ದಾರೆ. ಅದರ ಸಮಸ್ಯೆಯ ಬಗ್ಗೆ ನೋಟಿಸ್ ಕೊಟ್ಟಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗುವುದಕ್ಕೆ ಕಟ್ಟಡ ಮಾಲೀಕರು, ಅಂಗಡಿ ಮಾಲಕರು ಜವಾ ಬ್ದಾರರು, ನಗರ ಪಂಚಾಯತ್‌ನಲ್ಲಿ ಎಲ್ಲಿ ಸ್ಲಾಬ್ ಹಾಕಿದರೂ ಅಂಗಡಿ ಮಾಲೀಕರು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪಂಚಾಯತ್ ಕ್ಲೀನ್ ಮಾಡಿದ್ರೆ ಖರ್ಚು ಅವರು ಕೊಡಬೇಕು.

ಟ್ರಾಫಿಕ್ ತುಂಬಾ ಇರುವ ಕಾರಣ ಆ ಬಿಲ್ಡಿಂಗ್‌ನ ಸುತ್ತ ಬೇರೆ ದಿನ ವಾಹನ ಹೆಚ್ಚು ಇರುವ ಕಾರಣ ಭಾನುವಾರ ನಾವು ಚರಂಡಿ ಕ್ಲೀನ್ ಕೆಲಸ ಮಾಡಿದ್ದೇವೆ. ಕದ್ದು ಭಾನುವಾರ ಕೆಲಸ ಮಾಡಿದ್ದಲ್ಲ. ನಾವು ಎಲ್ ಆಕಾರದಲ್ಲಿ ಸಂಪೂರ್ಣ ಕ್ಲೀನ್ ಮಾಡಿದ್ದೇವೆ. ನಾವು ಅದನ್ನು ಮುಚ್ಚುವುದಿಲ್ಲ. ಅದು ಮಾಲೀಕರದ್ದೇ ಕರ್ತವ್ಯ. ಗಾಯ ಗೊಂಡವರಿಗೆ ಕಟ್ಟಡ ಮಾಲೀಕರೇ ಹೊಣೆ. ಪಟ್ಟಣ ಪಂಚಾಯತ್‌ನಿಂದ ಮುಚ್ಚುವ ಕ್ರಮವಿಲ್ಲ. ಸಾರ್ವಜನಿಕ ರಸ್ತೆಗೆ ಮಾಡುತ್ತೇವೆ. ಖಾಸಗಿ ಕಟ್ಟಡಕ್ಕೆ ನಾವು ಮಾಡಿಕೊಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವುದು. ಯಾವುದೇ ಕಾರಣಕ್ಕೂ ಪಟ್ಟಣ ಪಂಚಾಯತ್‌ನಿಂದ ಅಲ್ಲ. ವಿಘ್ನೇಶ್ ಬಿಲ್ಡಿಂಗ್‌ನಿಂದ ತೊಂದರೆ ಯಾಗುತ್ತಿದೆ ಎಂದು ಜಯಾನಂದ ಗೌಡ ಹೇಳಿದ್ದಾರೆ. ಜಯಾನಂದ್ ಗೌಡ, ಅಧ್ಯಕ್ಷರು, ಪಟ್ಟಣ ಪಂಚಾಯತ್ ಬೆಳ್ತಂಗಡಿ.

Exit mobile version