Site icon Suddi Belthangady

ಕುಕ್ಕೇಡಿ: ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕದ ಉದ್ಘಾಟನೆ

ಕುಕ್ಕೇಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಕುಕ್ಕೇಡಿ ಗ್ರಾಮ ಪಂಚಾಯತ್, ವತಿಯಿಂದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ತ್ಯಾಜ್ಯ ವಿಂಗಡಣೆಯ ಜಾಗೃತಿ ಮೂಡಿಸುವ ವಿಶೇಷ ಆಂದೋಲನ ಸಮಾರೋಪ ಸಮಾರಂಭ ಮತ್ತು ಸ್ವಚ್ಛ ಸಂಕೀರ್ಣ ಘಟಕದ ಲೋಕಾರ್ಪಣೆ ಜ. 3 ರಂದು ನಿಟ್ಟಡೆ ಗ್ರಾಮದ ಗಾಂದ್ಯೋಟ್ಟು ನಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಎ. ಅಧ್ಯಕ್ಷತೆ ವಹಿಸಿದ್ದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ಗ್ರಾಮ ಉಪಾಧ್ಯಕ್ಷೆ ಕುಸುಮಾ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಕುಕ್ಕೇಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್, ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಪೂಜಾರಿ, ಪಂಚಾಯತ್ ಸದಸ್ಯರು, ಸಿ. ಆರ್. ಪಿ. ಆರತಿ ಜೈನ್, ಭಾಗವಹಿಸಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಎ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರು, ಕುಕ್ಕೇಡಿ ನಿಟ್ಟಡೆ ಗ್ರಾಮಸ್ಥರು ಹಾಜರಿದ್ದರು.

ಸಾಂಕೇತಿಕವಾಗಿ ಕಸ ವಿಂಗಡಣೆಯ ಬುಟ್ಟಿ ವಿತರಿಸಲಾಯಿತು. ಜಗನ್ನಾಥ ದೇವಾಡಿಗ ಹೆಚ್. ನಿರೂಪಿಸಿದರು.

Exit mobile version