ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಇದರ ಬಿ. ವೋಕ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ಬಿ. ವೋಕ್ ಉತ್ಸವ 2025’ ನಡೆಯಿತು.
ವಿವಿಧ ಕಾಲೇಜುಗಳ 300 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, ಟೀಂ ಸ್ಪಾರ್ಟನ್ಸ್ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಇದೇ ಕಾರ್ಯಕ್ರಮದಲ್ಲಿ ಬಿ ವೋಕ್ ವಿಭಾಗದ 5 ವರ್ಷಗಳ ವರದಿಯನ್ನೊಳಗೊಂಡ ‘ಮೈಲ್‌ಸ್ಟೋನ್ಸ್’ ಪುಸ್ತಕ ಹಾಗೂ ವಿದ್ಯಾರ್ಥಿಗಳ ಬರೆದಿರುವ ಕಥೆಗಳ ಸಂಗ್ರಹ ‘ವ್ಯಾಸಂಗಿಗಳ ಕಥೆಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಎಲ್ಲಾ ಸ್ಪರ್ಧೆಗಳ ಬಳಿಕ ಟೀ ಖಾಬ್ ಮಣಿಪಾಲರವರಿಂದ ಮ್ಯೂಸಿಕಲ್ ಈವ್ನಿಂಗ್ – ಮನೋರಂಜನಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.