Site icon Suddi Belthangady

ಶ್ರೀ ಅಯ್ಯಪ್ಪ ಸ್ವಾಮಿಯ 50ನೇ ವರ್ಷದ ಸುವರ್ಣ ದೀಪೋತ್ಸವ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಬೆಳ್ತಂಗಡಿ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಜ. 3 ರಿಂದ ಪ್ರಾರಂಭಗೊಂಡು 5 ವರೆಗೆ ನಡೆಯಲಿದೆ. ಇಂದು(ಜ. 3) ಬೆಳಿಗ್ಗೆ ಗಣಹೋಮ ಶ್ರೀ ಶಾಸ್ತಾರ ಸಹಸ್ರ ಕದಳಿಯಾಗ ನಂತರ ದೀಪೋತ್ಸವ ಉದ್ಘಾಟನೆ ನಡೆಯಿತು.

ಉದ್ಘಾಟನೆಯನ್ನುರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಶಿವಪ್ರಸಾದ್ ಅಜಿಲ ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮುಗುಳಿ ನಾರಾಯಣ ರಾವ್, ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರತ್ ರಾಜ್ ಹಾಗೂ ಪ್ರಕಾಶ್ ಗುರುಸ್ವಾಮಿ ಉಪಸ್ಥಿತರಿದ್ದರು.

ದೀಪೋತ್ಸವ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಸಮಿತಿಯ ಸಂಚಾಲಕ‌ ತುಕಾರಾಂ ಧನ್ಯವಾದವಿತ್ತರು.

Exit mobile version