Site icon Suddi Belthangady

ಉಜಿರೆ: ಗ್ರಾಮ ಪಂಚಾಯತಿನಲ್ಲಿ ಸಮಾಲೋಚನೆ ಸಭೆ

ಉಜಿರೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಏಕ ಬಳಕೆ, ಪ್ಲಾಸ್ಟಿಕ್ ಬಳಕೆ, ಮುಕ್ತ ಗ್ರಾಮ ಹಾಗೂ ಕೊಳಚೆ ನೀರು ನಿರ್ವಹಣೆ ಬಗ್ಗೆ ಸಮಾಲೋಚನೆ ಸಭೆಯನ್ನು ಗ್ರಾ. ಪಂ. ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮತ್ತು ಹೊಟೇಲ್ ಗಳ ಕೊಳಚೆ ನೀರಿನಿಂದಾಗಿ ಕೆಲವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಯಾವ ರೀತಿಯಾಗಿ ನಿರ್ವಹಣೆಯನ್ನು ಮಾಡಬಹುದು ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಏಕ ಬಳಕೆ ಮುಕ್ತ ಗ್ರಾಮ ಮಾಡುವ ಬಗ್ಗೆ ಗ್ರಾಮದ ಎಲ್ಲಾ ವರ್ತಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕರಪತ್ರ ಹಂಚಿ ಎಲ್ಲಾ ಅಂಗಡಿ ಮಾಲೀಕರು ಇದರೊಂದಿಗೆ ಕೈಜೋಡಿಸುವ ಬಗ್ಗೆ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

ಉಜಿರೆ ಗ್ರಾಮದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆ ಅಂದರೆ ಕೊಳಚೆ ನೀರು ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾದಿತು ಎಂಬ ವಿಷಯದ ಬಗ್ಗೆ ಚರ್ಚಿಸಿ ಇದರ ಬಗ್ಗೆ ಎಲ್ಲಾ ಹೋಟೆಲ್ ಮಾಲೀಕರು ಸೇರಿ ಸೂಕ್ತವಾದ ವ್ಯವಸ್ಥೆಯನ್ನು ಮಾಡುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು.

ತ್ಯಾಜ್ಯ ವಿಲೇವಾರಿ ಬಗ್ಗೆ ಕೂಡ ಗ್ರಾಮ ಪಂಚಾಯತಿಯೊಂದಿಗೆ ಸಹಕರಿಸಬೇಕೆಂದು ಎಲ್ಲಾ ವರ್ತಕರು ಹಾಗೂ ಅಂಗಡಿ ಮಾಲಕರೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಿನಂತಿಯನ್ನು ಮಾಡಲಾಯಿತು. ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಉದ್ಯಮಿಗಳಾದ ಮೋಹನ್ ಕುಮಾರ್, ರಾಜೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.

Exit mobile version