Site icon Suddi Belthangady

ಕಳೆoಜ: ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ – ಡಿ. ಹರ್ಷೇಂದ್ರ ಕುಮಾರ್

ಕಳೆoಜ: ಗ್ರಾಮದ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಜ. 20 ರಿಂದ 23 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಜ. 2 ರಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಗರ್ಭ ಗುಡಿಯ ಕೆಲಸದ ಬಗ್ಗೆ ಹಾಗೂ ಅಭಿವೃದ್ಧಿಯ ಬಗ್ಗೆ ಮಾರ್ಗ ದರ್ಶನವನ್ನು ನೀಡಿದರು.

ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಶ್ರೀಧರ್ ರಾವ್ ಕಾಯಡ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಚಂದ್ರಶೇಖರ. ಕೆ ನಿಡ್ಲೆ, ಕಾರ್ಯದರ್ಶಿ ಕೇಶವ ಗೌಡ ಮಲ್ಲಜಾಲ್, ಕೇಶವ ಗೌಡ ಬರೆಮೇಲು ದರ್ಖಾಸು, ಕೊರಗಪ್ಪ ಗೌಡ ನಿಡ್ಲೆ, ಬಾಲಕೃಷ್ಣ ಬರೆಮೇಲು, ಬಾಲಕ್ರಷ್ಣ ದೇವಾಡಿಗ, ನೀಲಯ್ಯ ಗೌಡ, ರಾಮಚಂದ್ರ ಗೌಡ, ರಘುಚಂದ್ರ ಪೂಜಾರಿ, ರುಕ್ಮಯ ಗೌಡ ಬರೆಮೇಲು, ವಸಂತ ಪೂಜಾರಿ, ದೇವಪ್ಪ ಪೂಜಾರಿ, ರಮ್ಯಾ ಮಲ್ಲಜಾಲ್, ಶೋಭಾ ನಾಯೆರ್ ಮಾರ್, ವಿನೋದ, ದಿವ್ಯ, ಉಷಾ ಹಾಗೂ ಗೀತಾ ಉಪಸ್ಥಿತರಿದ್ದರು.

Exit mobile version