Site icon Suddi Belthangady

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಧಾರ್ಮಿಕ ಸಭೆ

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ರಾಮ ನಗರ ಮೈರಳಿಕೆ ಓಡಿಲ್ನಾಳ ಡಿ. 28 ರಿoದ ಪ್ರಾರoಭವಾದ ಜಾತ್ರೋತ್ಸವದ ಪ್ರಯುಕ್ತ ಡಿ. 30 ರoದು ಧಾರ್ಮಿಕ ಸಭೆ ಜರಗಿತು.

ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಶಾಸಕರಾದ ಹರೀಶ್ ಪೂಂಜ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್, ಶೆಟ್ಟಿ ಆಗಮಿಸಿದ್ದರು.

ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲಾಕ್ಷ ಗೌಡ ಪಡ್ಪು, ಯುವ ಸಮಿತಿಯ ಅಧ್ಯಕ್ಷ ನಿತೀಶ್ ಕೆ ಓಡಿಲ್ನಾಳ, ಭಜನಾ ಸಮಿತಿಯ ಅಧ್ಯಕ್ಷ ಯೋಗೀಶ್ ಕೊಡಂಗೆ, ವಾಮನ ಮೂಲ್ಯ ಮಡoತಿಲ ಉಪಸ್ಥಿತರಿದ್ದರು.

ಸುದೀಪ್ ಶೆಟ್ಟಿ ಸ್ವಾಗತಿಸಿದರು. ದೇವಸ್ಥಾನದಲ್ಲಿ ತಂತ್ರಗಳಾದ ವೇದಮೂರ್ತಿ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣ ಹೋಮ, ರುದ್ರ ಹೋಮ, ಶೋಡರ ಬಲಿ ಉತ್ಸವ, ಕಲಶ ಪೂಜೆ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪನೆ ಜರಗಿತು. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಮಕ್ಕಳಿಂದ ನ್ರತ್ಯ ಕಾರ್ಯಕ್ರಮ ಜರಗಿತು. ವಿಮಲಾಕ್ಷ ಪಡ್ಪು ಧನ್ಯವಾದವಿತ್ತರು.

Exit mobile version