Site icon Suddi Belthangady

ಬಾಳೆಕುದ್ರು ಮಠ – ಹೊಕ್ಕಾಡಿಗೋಳಿಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿ ಉತ್ತರಾಧಿಕಾರೀ ಶಿಷ್ಯ ಸ್ವೀಕಾರ

ಆರಂಬೋಡಿ: ಬ್ರಹ್ಮಾವರ ತಾಲೂಕಿನ ಹಂಗಾರ ಕಟ್ಟೆಯ ಬಾಳೆಕುದ್ರು ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ನರಸಿಂಹಾಶ್ರಮ ಮಹಾಸ್ವಾಮಿಯವರು
ಲಕ್ಷ್ಮೀನರಸಿಂಹ ದೇವರ ಪ್ರೇರಣೆಯಂತೆ ಉತ್ತರಾಧಿಕಾರೀ ಶಿಷ್ಯರನ್ನಾಗಿ ಹೊಕ್ಕಾಡಿಗೋಳಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಸ್ವೀಕರಿಸಿರುತ್ತಾರೆ.

ಇವರು ಮೂಲತಃ ಆರಂಬೋಡಿಯ ಹೊಕ್ಕಾಡಿಗೋಳಿಯ ಬಳಂಜ ನರಸಿಂಹ ಭಟ್ ರವರ ಮೊಮ್ಮಗ, ಸುಂದರ ಭಟ್ ಮತ್ತು ಸರಸ್ವತಿ ದಂಪತಿಯ ಪುತ್ರ.

ಬಾಳೆಕುದ್ರು ಶ್ರೀಮಠವು ಭಾಗವತ – ಅದೈತ ಸಂಪ್ರದಾಯಕ್ಕೆ ಸೇರಿದ್ದು, ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೇಷ್ಠವಾದ ಗುರು ಪರಂಪರೆಯನ್ನು ಹೊಂದಿರುತ್ತದೆ. ಮಹಾನ್ ತಪಸ್ವಿಗಳಾದ ಮಹರ್ಷಿ ವರದಮುನಿಗಳಿಂದ ಆರಂಭವಾಗಿರುವ ರಾಜಮಾನ್ಯವಾದ ಈ ಸ್ವತಂತ್ರ ಮಠವು ಅಂದಿನಿಂದಲೂ ದೇಶ, ಕಾಲ, ಪರಿಸ್ಥಿತಿಗೆ ತಕ್ಕಂತೆ ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಮಸ್ತ ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದೆ.

Exit mobile version