ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ 2023- 24 ನೇ ಸಾಲಿನ ವಾರ್ಷಿಕ ಮಹಾಸಭೆ ಡಿ. 31 ರಂದು ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ಕುಕ್ಕೇಡಿ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಕೊಕ್ರಾಡಿ ಜಮಾ ಖರ್ಚು ವಿವರ ಮಂಡಿಸಿದರು.
ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಬಿಲ್ಲವ ಮಹಿಳಾ ವೇದಿಕೆವ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘದ ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ನಿರ್ದೇಶಕರುಗಳಾದ ವಿಶ್ವನಾಥ ಪೂಜಾರಿ ಗುಂಡೂರಿ, ಸಂಜೀವ ಪೂಜಾರಿ ಕೋಡಂಗೆ, ಜಯ ಕುಮಾರ್ ನಡ, ನಾರಾಯಣ ಉಚ್ಚುರು, ರವೀಂದ್ರ ಬಿ. ಆಮೀನ್, ಗುರುರಾಜ್ ಗುರಿಪಳ್ಳ, ಚಂದ್ರಶೇಖರ್ ಇಂದಬೆಟ್ಟು, ಸಂತೋಷ್ ಕೆ. ಸಿ., ಸುನೀಲ್ ಕನ್ಯಾಡಿ, ರೂಪೇಶ್ ಕೆ. ಧರ್ಮಸ್ಥಳ, ಪ್ರಮೋದ್ ಕುಮಾರ್ ಮಚ್ಚಿನ, ಅನೂಪ್ ಬಂಗೇರ, ತರುಷ್ ಜೆ. ಹೇರಾಜೆ, ಕರುಣಾಕರ ಬೆಳ್ತಂಗಡಿ, ಉಷಾ ಕಿರಣ್ ಬಾರ್ಯ, ವಿನೋದಿನಿ ರಾಮಪ್ಪ, ನಮಿತಾ ತೋಟತ್ತಾಡಿ, ರಾಜಶ್ರೀ ರಮಣ್, ಕಮಲಾಕ್ಷ ಬೆಳ್ತಂಗಡಿ, ಹರಿದಾಸ್ ಕೇದೆ, ಗುಣಾಕರ ಅಗ್ನಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿಕಟ ಪೂರ್ವ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಹೇರಾಜೆ, ಗಂಗಾಧರ ಮಿತ್ತಮಾರು, ಸಂಘದ ಮಾಜಿ ನಿರ್ದೇಶಕರು, ಯುವ ಬಿಲ್ಲವ, ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಜರಿದ್ದರು.