Site icon Suddi Belthangady

ಹೆದ್ದಾರಿ ಬದಿಯ ಆವರಣ ಗೋಡೆಗೆ ಕಾರು ಡಿಕ್ಕಿ – ಪಾರಾದ ಅಯ್ಯಪ್ಪ ವೃತಧಾರಿಗಳು

ಬೆಳ್ತಂಗಡಿ: ಹೆದ್ದಾರಿ ಬದಿಯ ಮನೆ ಆವರಣ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಡಿ. 31 ರಂದು ಮುಂಜಾನೆ ನಡೆದಿದೆ. ಆಂದ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಯ್ಯಪ್ಪ ವೃತದಾರಿಗಳ ಕಾರು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಧರ್ಮಸ್ಥಳಕ್ಕೆ ತೆರಳುತಿದ್ದ ವೇಳೆ ಬೆಳ್ತಂಗಡಿಯ ಮೂರು ಮಾರ್ಗದ ಹತ್ತಿರದ ಮಾದರಿ ಶಾಲೆಯ ಎದುರಿನ ಹೆದ್ದಾರಿ ಬದಿಯ ಮನೆಯ ಆವರಣ ಗೋಡೆಗೆ ಮುಂಜಾನೆ 4.30 ರ ವೇಳೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು ಆವರಣ ಗೋಡೆಗೆ ಹಾನಿಯಾಗಿದೆ. ಅದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಒಂದು ವೇಳೆ ಎದುರಿನಿಂದ ವಾಹನಗಳು ಅಥವಾ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುತಿದ್ದರೆ ದೊಡ್ಡ ಅಪಾಯ ಸಂಭವಿಸುತಿತ್ತು. ಅಫಘಾತಕ್ಕೆ ನಿದ್ದೆ ಕಾರಣ ಎಂದು ತಿಳಿದು ಬಂದಿದೆ.

Exit mobile version