ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ. 5 ರಂದು ನಡೆಯಲಿದ್ದು, 12 ಜನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ 15 ಜನ ನಾಮ ಪತ್ರ ಸಲ್ಲಿಸಿದ್ದರು.
ಡಿ. 30 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದ್ದು, 3 ಜನ ನಾಮಪತ್ರ ವಾಪಸ್ಸು ಪಡೆದಿದ್ದರು. ಶುಭರಾಜ್ ಹೆಗ್ಡೆ, ಅಬ್ದುಲ್ ಸಲಾಂ, ವಿನೋಧರ ಪೂಜಾರಿ ಇವರು ನಾಮಪತ್ರ ವಾಪಾಸ್ಸು ಪಡೆದಿದ್ದರಿಂದ ಕಾಂಗ್ರೆಸ್ ಬೆಂಬಲಿತ 12 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾಗಿ ಸತೀಶ್ ಕೆ. ಕಾಶಿಪಟ್ಣ, ಸೀತಾರಾಮ್ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ಹರಿಪ್ರಸಾದ್, ಕೃಷ್ಣಪ್ಪ, ಶ್ರೀಪತಿ ಉಪಾದ್ಯಾಯ, ಅಕ್ಷಯ ಕುಮಾರ್, ಸುರೇಶ್, ವಿಜಯ ನಾಯ್ಕ, ರಾಜೇಶ್ ಶೆಟ್ಟಿ, ದೇವಕಿ, ಸುಜಾತ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪ್ರತಿಮಾ ಭಾಗವಹಿಸಿದ್ದರು.