Site icon Suddi Belthangady

ತೆಂಗಿನ ಮರ ಹತ್ತುವವರಿಗೆ ವಿಮೆ

ಬೆಳ್ತಂಗಡಿ: ತೆಂಗು ಅಭಿವೃದ್ಧಿ ಮಂಡಳಿಯು ‘ಕೇರಾ ಸುರಕ್ಷಾ ವಿಮಾ ಯೋಜನೆ’ ಜಾರಿ ಮಾಡಿದ್ದು, ತೆಂಗಿನ ಕಾಯಿ ಕೊಯ್ಲು ಮಾಡುವವರಿಗೆ ನೆರವಾಗಲಿದೆ.

ಇದು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದೆ. ಕಾಯಿ, ಎಳನೀರು ಕೊಯ್ಲು ಮಾಡುವ ಗೊನೆಗಾರರ ಸುರಕ್ಷತಾ ದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಗೊನೆಗಾರರಿಗೆ ಏನೇ ಅಪಘಾತ ಸಂಭವಿಸಿದರೂ ವಿಮೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಮರದಿಂದ ಕಾಯಿ ಕೀಳುವ ಸಂದರ್ಭದಲ್ಲಿ ಬಿದ್ದು ಮೃತಪಟ್ಟರೆ ರೂ. 7 ಲಕ್ಷ, ಅಂಗವಿಕಲರಾದರೆ ರೂ. 3.50 ಲಕ್ಷ, ಆಸ್ಪತ್ರೆ ವೆಚ್ಚ ರೂ. 2 ಲಕ್ಷ ಪರಿಹಾರ ನೀಡಲಾಗುತ್ತದೆ. ವಿಮೆ ಪಡೆಯಲು ವಾರ್ಷಿಕ ರೂ. 956 ಪಾವತಿಸಬೇಕಿದ್ದು, ಅದರಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ರೂ. 717 ನೀಡಿದರೆ ರೈತರು ರೂ. 239 ಪಾವತಿಸಬೇಕಿದೆ.

ಜಿಲ್ಲೆಯಲ್ಲಿ 2,24,507 ಹೆಕ್ಟೇ‌ರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು, ರೈತರು ವಿಮೆ ಸೌಲಭ್ಯ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಜಾಲತಾಣ www.coconut.board. gov.in/ ಅಥವಾ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.

Exit mobile version