Site icon Suddi Belthangady

ಸೇನೆಗೆ ಆಯ್ಕೆಯಾದ ಬಳಂಜದ ಮನೋಹರ ಪೂಜಾರಿ

ಬಳಂಜ: ದೇಶ ಸೇವೆಯ ಉತ್ಕಟ ಇಚ್ಛಾಶಕ್ತಿಯಿಂದ ಪ್ರೇರಿತನಾಗಿ ಸೇನೆಗೆ ಆಯ್ಕೆಯಾದ ಮನೋಹರ ಪೂಜಾರಿ ನಾಲ್ಕೂರು. ರಾಜು ಪೂಜಾರಿ ಮತ್ತು ಡೀಕಮ್ಮರವರ ಪುತ್ರ. ಇವರು ಗಡಿ ಭದ್ರತಾ ಪಡೆಯ ಸೈನಿಕನಾಗಿ ನಿಯುಕ್ತಿಗೊಂಡಿದ್ದು, ಜ. 18 ರಂದು ತರಬೇತಿ ಪಡೆಯಲು ಜಮ್ಮು ಕಾಶ್ಮೀರದ ಉಧಮ್ ಪುರಕ್ಕೆ ತೆರಳಲಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಳಂಜ ಶಾಲೆಯಲ್ಲಿ ಕಲಿತು, ಪದವಿ ಪೂರ್ವ ಶಿಕ್ಷಣವನ್ನು ಅಳದಂಗಡಿಯ ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಉಜಿರೆಯ ಎಸ್. ಡಿ. ಎಮ್. ನಲ್ಲಿ ಪೂರ್ಣಗೊಳಿಸಿದ್ದಾರೆ.

Exit mobile version