ಬೆಳ್ತಂಗಡಿ: ಕಟೀಲು 5 ನೇ ಮೇಳದ ಚೆಂಡೆವಾದಕ ಮಧೂರು ರಾಮಪ್ರಕಾಶ ಕಲ್ಲೂರಾಯರಿಗೆ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿಯು ಈ ಬಾರಿ ಬೆಳ್ತಂಗಡಿಯ ಗೇರುಕಟ್ಟೆಯ ಮಧೂರು ರಾಮಪ್ರಕಾಶ ಕಲ್ಲೂರಾಯರಿಗೆ ಸಂದಿದೆ.
ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಕಟೀಲಿನ ಬ್ರಹ್ಮಶ್ರೀ ವೇದಮೂರ್ತಿ ಆಸ್ರಣ್ಣ ಮನೆಯವರೆಲ್ಲರೂ, ಗಣ್ಯಾತಿ ಗಣ್ಯರೆಲ್ಲ ಉಪಸ್ಥಿತರಿದ್ದರು. ರಾಮಪ್ರಕಾಶ ಕಲ್ಲೂರಾಯರು ಬೆಳ್ತಂಗಡಿಯ ಗೇರುಕಟ್ಟೆಯ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಮತ್ತು ಉಪನ್ಯಾಸಕಿ ಕೆ. ಆರ್. ಸುವರ್ಣ ಕುಮಾರಿಯವರ ಪುತ್ರರಾಗಿದ್ದಾರೆ. ಹಿಮ್ಮೇಳದ ಎಲ್ಲಾ ಕ್ಷೇತ್ರದಲ್ಲಿಯೂ ರಾಮ ಪ್ರಕಾಶ ಕಲ್ಲೂರಾಯರು ಪ್ರತಿಭಾವಂತರಾಗಿದ್ದಾರೆ.