Site icon Suddi Belthangady

ಶಿಶಿಲ: ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008. ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಡಿ. 29 ರಂದು ಪರಮಪೂಜ್ಯ 108 ಮುನಿಶ್ರೀ ಆದಿತ್ಯ ಸಾಗರ ಮಹಾರಾಜರು ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳನ್ನು ಶ್ರೀ ಕ್ಷೇತ್ರ ಚಂದ್ರಪುರಕ್ಕೆ ಆಶೀರ್ವಾದ ಮೂಲಕ ಶ್ರೀ ಪವನ್ ಪಂಡಿತ್ ಹಾಗೂ ಶ್ರೀ ಶ್ರೀವೀರ ಇಂದ್ರರವರ ಮೂಲಕ ಕಳುಹಿಸಿ ಕೊಟ್ಟಿದ್ದು, ಜಿನಬಿಂಬಗಳಿಗೆ ಜಲ, ಗಂಧ, ಸಿಯಾಳ ಹಾಲು ಮುಂತಾದ ದ್ರವ್ಯಗಳಿಂದ ಶ್ರಾವಕ ಶ್ರಾವಕಿಯರು ಅಭಿಷೇಕ ಮಾಡಿದ ನಂತರ ಶ್ರೀ ಅರಿಹಂತ ಇಂದ್ರರು 24 ಜಿನ ಬಿಂಬಗಳನ್ನು ಗಂಧಕುಟಿಯಲ್ಲಿ ಪ್ರತಿಷ್ಠಾಪಿಸಿದರು.

ಈ ಸಂದರ್ಭದಲ್ಲಿ ತ್ರಿಲೋಕ ಚಿಹ್ನೆಯ ನಾಮಫಲಕವನ್ನು ದಾನಿಗಳಾದ ಶ್ರೀ ಪದ್ಮಪ್ರಸಾದ್ ಜೈನ್ ಆದೀಶ ಲಾಡ್ಜ್ ಮಾಲಕ ಕನ್ಯಾಡಿ ಧರ್ಮಸ್ಥಳ ಇವರು ಅನಾವರಣಗೊಳಿಸಿದರು. ಶ್ರಾವಕಿಯರಿಂದ ಭಜನೆ, ಗ್ರೀಷ್ಮ ಇಜಿಲಾoಪಾಡಿ ಜಿನಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಜಗದ್ಗುರು ಪರಮಪೂಜ್ಯ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೀಡಿದ ಇಂದ್ರಧ್ವಜವನ್ನು ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಪಣಿರಾಜ್ ಜೈನ್ ಕೊಕ್ಕಡ ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯಕುಮಾರ್ ಜೈನ್, ಆಡಳಿತ ಮಂಡಳಿಯ ಪದಾಧಿಕಾರಿ ಪಿ. ಏನ್. ರವಿರಾಜ್ ಬಂಗ, ಜಿನರಾಜ ಪೂವಣಿ, ರಾಜೇಂದ್ರ ಜೈನ್, ಫಣಿರಾಜ್ ಜೈನ್, ಸಂತೋಷ್ ಕುಮಾರ್, ವೀರೇಂದ್ರ ಕುಮಾರ್, ಅಭಿನಂದನ್ ಜೈನ್, ಅತೀಶಯ್ ಜೈನ್, ಜಿನೇಂದ್ರ ಕುಮಾರ್, ಗುಣಪಾಲ ಬಂಗ ಹಾಗೂ ಬಾರಿ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮವನ್ನು ಪವನ್ ಪಂಡಿತ್ ಶ್ರೀ ವೀರ ಇಂದ್ರ ನೆರವೇರಿಸಿದರು. ಆಡಳಿತ ಮಂಡಳಿ ಸಂಚಾಲಕ ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Exit mobile version