Site icon Suddi Belthangady

ಉಜಿರೆ: ಅಮ್ಮ ಹೇಳಿದ ಕತೆಗಳು ಪುಸ್ತಕ ಬಿಡುಗಡೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್ ಬರೆದ ‘ ಅಮ್ಮ ಹೇಳಿದ ಕತೆಗಳು’ ಕಥಾಸಂಕಲನದ  ಬಿಡುಗಡೆಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಡಿ. 29 ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಕೃತಿಕರ್ತ ಸುಬ್ರಹ್ಮಣ್ಯ ಭಟ್, ಅವರ ಪತ್ನಿ ಭವ್ಯ ಜಿ. ಜಿ. ಹಾಗೂ ಮಕ್ಕಳಾದ ಅಭಿಗಮ್ಯ ರಾಮ್ ಮತ್ತು ಆಶ್ಮನ್ ಕೃಷ್ಣ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಭಟ್ಟರ 2 ನೇ ಕಥಾ ಸಂಕಲನ ಇದಾಗಿದ್ದು ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ಉಮಾ ಅನಂತ್ ಇದಕ್ಕೆ ಮುನ್ನುಡಿ ಬರೆದಿದ್ದು, ಖ್ಯಾತ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಶುಭನುಡಿಗಳನ್ನು ಬರೆದಿರುತ್ತಾರೆ.

ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಇದನ್ನು ಪ್ರಕಟಿಸಿದ್ದು, ಪ್ರತಿಗಳಿಗಾಗಿ ಲೇಖಕರನ್ನು 9448951856 ರಲ್ಲಿ ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ.

Exit mobile version