Site icon Suddi Belthangady

ಬೆಳಾಲು ಸಹಕಾರ ಸಂಘದ ಚುನಾವಣೆ ಹಾಲಿ ಅಧ್ಯಕ್ಷ ಪದ್ಮಗೌಡ ತಂಡಕ್ಕೆ ಜಯ

ಬೆಳಾಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಡಿ. 29ರಂದು ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಹೆಚ್. ಪದ್ಮ ಗೌಡರ ನಾಯಕತ್ವದ ತಂಡ ವಿಜಯ ಶಾಲಿಯಾಗಿದೆ. ಸಾಮಾನ್ಯ 6 ಸ್ಥಾನಕ್ಕೆ 7 ಮಂದಿ ಅಭ್ಯರ್ಥಿಗಳು ಸ್ಪರ್ದಿಸಿದ್ದು, ಇದರಲ್ಲಿ ಹಾಲಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಪ್ರವೀಣ್ ವಿಜಯ್, ದಾಮೋದರ ಗೌಡ ಸುರುಳಿ, ಸುರೇಂದ್ರ ಗೌಡ ಎಸ್., ರಾಜಪ್ಪ ಯಾನೆ ಸೀತಾರಾಮ ಗೌಡ, ರಮೇಶ್ ಗೌಡ ಅಂಗಡಿಬೆಟ್ಟು
ವಿಜಯ ಶಾಲಿಗಳಾದರು.

ಸ್ಪರ್ಧೆ ಮಾಡಿದ್ದ ಗೋಪಾಲ ಕೃಷ್ಣ ಭಟ್ ಪರಾಭವಗೊಂಡರು. ಮೀಸಲು ಕ್ಷೇತ್ರದ 6 ಸ್ಥಾನಕ್ಕೆ ಎಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಸ್ಥಾನದಿಂದ ದಿನೇಶ್ ಕೋಟ್ಯಾನ್, ಮಹಿಳಾ ಮೀಸಲು ಕ್ಷೇತ್ರಕ್ಕೆ ಸುಕನ್ಯಾ ನಾರಾಯಣ ಸುವರ್ಣ, ಹೇಮಾ ವಚ್ಚ, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ
ಶೀನಪ್ಪ ಗೌಡ ಕೊಲ್ಲಿಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ
ಸೀತಾರಾಮ ಬಿ. ಎಸ್., ಪರಿಶಿಷ್ಟ ಜಾತಿ ಕ್ಷೇತ್ರದಿಂದ ಚಿಂಕ್ರ ಮಣ್ಣಾಜೆ ಇವರು ಅವಿರೋಧವಾಗಿ ಆಯ್ಕೆಯಾದರು.

Exit mobile version