Site icon Suddi Belthangady

ಕೊಕ್ಕಡ ದೇವಸ್ಥಾನದ ಶ್ಯಾಮ ಬಸವ ಇನ್ನಿಲ್ಲ

ಕೊಕ್ಕಡ: ಕಳೆದ ಸುಮಾರು 15 ವರ್ಷಗಳಿಂದ ಶ್ಯಾಮ ಬಸವ (ನಂದಿ) ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ಜಾತ್ರಾ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಸೇವೆಯನ್ನು ಸಲ್ಲಿಸುತ್ತಿದ್ದೂ. ಶ್ಯಾಮ ಬಸವನ ಆರೈಕೆಯನ್ನು ಮಡ್ಯಾಳಗುಂಡಿ ಪುರುಷೋತ್ತಮ ಟೈಲರ್ ಮಾಡುತ್ತಿದ್ದರು. ಹಾಗೂ ಕಳೆದ 7 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಮಧೇನು ಗೋಶಾಲೆ ಹಲ್ಲಿಂಗೇರಿಯಲ್ಲಿ ಆರೈಕೆಯನ್ನು ಮಾಡುತ್ತಿದ್ದರು.
ಇಂದು ಅಲ್ಪಕಾಲಿಕ ಅನಾರೋಗ್ಯದ ಕಾರಣ ಹಲ್ಲಿಂಗೇರಿ ಗೋಶಾಲೆಯಲ್ಲಿ ಶ್ಯಾಮ ಬಸವ ದೈವಾದೀನವಾಗಿದ್ದು . ಶ್ಯಾಮ ಬಸವನ ನಿಧನ ದೇವಳದ ಭಕ್ತರಲ್ಲಿ ಅತೀವ ನೋವುಂಟು ಮಾಡಿದೆ.

Exit mobile version