ಭಾರತದ ಮೊದಲ ಸಿಖ್ ಪ್ರಧಾನಿ , ತಮ್ಮ ದೂರದೃಷ್ಟಿಯಿಂದ ರಾಷ್ಟ್ರವನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲೆತ್ತಿ ಭಾರತ ದೇಶವನ್ನು ಪ್ರಬಲವಾಗಿಸಿದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರು ದೈವಾಧೀನರಾದ ವಿಷಯ ಅತೀವ ನೋವನ್ನು ತಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ಕೇಂದ್ರ ಹಣಕಾಸು ಸಚಿವರಾಗಿ, ಆರ್. ಬಿ. ಐ ಗವರ್ನರ್ ಆಗಿ, ಆರ್ಥಿಕ ಸಲಹೆಗಾರರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಸುಮಾರು 5 ದಶಕಗಳ ಕಾಲ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅಬ್ದುಲ್ ರಹಿಮಾನ್ ಪಡಪು ಪ್ರದಾನ ಕಾರ್ಯದರ್ಶಿ ಕೆ. ಪಿ. ಸಿ. ಸಿ ಕಾರ್ಮಿಕ ಘಟಕ ಸಂತಾಪ ವ್ಯಕ್ತಪಡಿಸಿದ್ದಾರೆ.