Site icon Suddi Belthangady

ಅಧಿವೇಶನದಲ್ಲಿ ಎಕ್ಸೆಲ್ ಕಾಲೇಜ್‌ನ ವಿವರ ಕೋರಿದ ಶಾಸಕರು – ಕುತೂಹಲ ಕೆರಳಿಸಿದ ಹರೀಶ್ ಪೂಂಜರ ನಡೆ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸೆಲ್ ಕಾಲೇಜ್‌ನ ಕುರಿತು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ಕೇಳುವ ಮೂಲಕ ಶಾಸಕ ಹರೀಶ್ ಪೂಂಜ ಅಚ್ಚರಿ ಮೂಡಿಸಿದ್ದಾರೆ.

ಹರೀಶ್ ಪೂಂಜ ಕೇಳಿದ ಮಾಹಿತಿಯ ವಿವರ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಸರ್ವೆ ನಂ.168/2-2.78, 168/3=2.42 ಒಟ್ಟು 5.20+0.90 ಎಕ್ರೆ ಜಮೀನು ಹೊಂದಿರುವ ಎಕ್ಸೆಲ್ ಕಾಲೇಜಿನ ಜಮೀನಿನ ಕ್ರಯಪತ್ರ, ದಿನಾಂಕ ೨೨.೯.೨೦೨೩ರಂದು ತಹಶೀಲ್ದಾರು ಭೂಪರಿವರ್ತನೆಗೊಳಿಸಿದ ಆದೇಶ ನಕಲು,2022-23, 2023-24, 2024-25 ಸಾಲಿನಲ್ಲಿ ವಿದ್ಯಾರ್ಥಿಗಳ ಸೇರ್ಪಡೆಯಾದ ಒಟ್ಟು ಸಂಖ್ಯೆ ವಿಭಾಗವಾರು, ದ್ರವ ತ್ಯಾಜ್ಯ ವಿಲೇವಾರಿ ಘಟಕದ ವಿನ್ಯಾಸ ನಕ್ಷೆ ವಿವರ, ಪಹಣಿ ಸಂಬಂಧ ಪಟ್ಟ ಭೂಮಿಯ ವಿವರ ಖರೀದಿಸಿದ ಜಮೀನಿನ ಮ್ಯುಟೇಷನ್ ಪ್ರತಿ ವಿವರ, ನಗರ ಯೋಜನಾ ಪ್ರಾಧಿಕಾರ ಮತ್ತು ಗ್ರಾಮಾಂತರದಿಂದ ಅನುಮೋದನೆ ಆದ ಸಮಗ್ರ ಲೇಔಟ್ ಪ್ಲಾನ್ (ರಸ್ತೆ, ಆಟದ ಮೈದಾನ, ದ್ರವ ತ್ಯಾಜ್ಯ, ಘನ ತ್ಯಾಜ್ಯ, ವಿಲೇವಾರಿ ಘಟಕದ ವಿನ್ಯಾಸ ನಕ್ಷೆ, ವಸತಿ ನಿಲಯಗಳು ಇತ್ಯಾದಿ) ಕಾಲೇಜಿನ ಸಂಪೂರ್ಣ ಮಾಹಿತಿ ವಿವರಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಬಯಸುತ್ತೇನೆ ಎಂದು ಹರೀಶ್ ಪೂಂಜ ಅವರು ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ಕೇಳಿದ್ದಾರೆ. ಹರೀಶ್ ಪೂಂಜ ಅವರು ಸರಕಾರದಿಂದ ಕೇಳಿರುವ ಮಾಹಿತಿಗಳನ್ನು ಸರಕಾರ ಅವರಿಗೆ ಒದಗಿಸಿದೆ ಎಂದು ತಿಳಿದು ಬಂದಿದೆ. ಹರೀಶ್ ಪೂಂಜ ಅವರು ಎಕ್ಸೆಲ್ ಕಾಲೇಜಿನ ಕುರಿತು ಯಾವ ಕಾರಣಕ್ಕಾಗಿ ಮಾಹಿತಿ ಕೇಳಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

Exit mobile version