Site icon Suddi Belthangady

ತೋಟತ್ತಾಡಿ: ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಗೆ ಸುರೇಶ್ ದೇವಾಡಿಗರಿಂದ ಸಮವಸ್ತ್ರ ವಿತರಣೆ

ತೋಟತ್ತಾಡಿ: ಶ್ರೀ ಉಳ್ಳಾಲ್ತಿ ಭಜನಾ ಮಂದಿರ ಆರಂತಬೈಲು ತೋಟತ್ತಾಡಿ ಇದರ ಭಜನಾ ತಂಡದ ಸದಸ್ಯರಿಗೆ ಯುವ ಉದ್ಯಮಿ ಸುರೇಶ್ ದೇವಾಡಿಗ ಗಾಣದಕೊಟ್ಟಿಗೆ ಸೇವಾ ರೂಪವಾಗಿ ನೀಡಿದ ಸಮವಸ್ತ್ರವನ್ನು ಡಿ. 25 ರಂದು ಭಜನಾ ಮಂದಿರದ 22 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ದಿನೇಶ್ ನಾಯ್ಕ ಕೋಟೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಭಜನಾ ಮಂದಿರದ ಕಾರ್ಯದರ್ಶಿ ಸುಜಿತ್ ಶೆಟ್ಟಿ ಹಳೆ ಕಕ್ಕಿಂಜೆ, ನವರಾತ್ರಿ ಭಜನಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಕುಡೆಂಚ, ಕಾರ್ಯದರ್ಶಿ ಶ್ರೀಮತಿ ವಿನುತಾ ಡಿ ಮಜಲು, ಜೊತೆ ಕಾರ್ಯದರ್ಶಿ ಸನತ್ ಕುಮಾರ್ ಮೂರ್ಜೆ, ಮಂದಿರದ ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version