ಶಿಶಿಲ: ಗೌಡರ ಯಾನೆ ಒಕ್ಕಲಿಗ ಗ್ರಾಮ ಸಮಿತಿ ಹಾಗೂ ಶಿಶಿಲ ಗ್ರಾಮದ ಬೈಲುವಾರು ಸಮಿತಿಯ ಪದಾಧಿಕಾರಿಗಳ ಸಭೆ ಸಮುದಾಯ ಭವನ ನಾಗನಡ್ಕದಲ್ಲಿ ನಡೆಸಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ಜಿ., ಶಿಶಿಲ ಯುವ ಸಮಿತಿ ಅಧ್ಯಕ್ಷ ಪ್ರಮಿತ್ ಗೌಡ, ಮಹಿಳಾ ಸಮಿತಿ ಅಧ್ಯಕ್ಷೆ ಉಮಾವತಿ ಗಣೇಶ್ ಗೌಡ ಇವರು ನಡೆಸಿದ ಸಭೆಯಲ್ಲಿ ಸಂಘದ ಕಾರ್‍ಯಕರ್ತ ಭುವನ ಗೌಡ, ರಾಕೇಶ್ ಗೌಡ, ಉಪಾಧ್ಯಕ್ಷರಾದ ಕೊರಗಪ್ಪ ಗೌಡ, ಸುಬ್ರಾಯ ಗೌಡ ಬದ್ರಿಜಾಲು, ರಮೇಶ್ ಗೌಡ, ಗ್ರಾಮ ಗೌಡರಾದ ಸೇಸಪ್ಪ ಗೌಡ, ಬಾಬು ಗೌಡ ದೇವಸ, ಸುಬ್ಬಣ್ಣ ಗೌಡ ಬದ್ರಿಜಾಲು ಹಾಗೂ ಗ್ರಾಮದ ಎಲ್ಲಾ ಪದಾಧಿಕಾರಿಗಳು ಭಾಗವಸಿದ್ದರು.