Site icon Suddi Belthangady

ಉಜಿರೆ: ಎಸ್. ಡಿ. ಎಮ್. ಕಾಲೇಜಿನ‌ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಸಮಿತಿ – ವಿದ್ಯುಚ್ಛಕ್ತಿಯ ಸಂರಕ್ಷಣಾ ಕಾರ್ಯಾಗಾರ

ಉಜಿರೆ: ಎಸ್. ಡಿ. ಎಮ್. ಕಾಲೇಜಿನ‌ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಸಮಿತಿಯಿಂದ‌ ವಿದ್ಯುಚ್ಛಕ್ತಿಯ ಸಂರಕ್ಷಣಾ ಕಾರ್ಯಾಗಾರ ಬೆಳ್ತಂಗಡಿಯ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಸುಮಾರು 150 ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.

ಕಾರ್ಯಕ್ರಮದಲ್ಲಿ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿಯರಾದ ಪೂರ್ವಿಕ, ಪ್ರಿಯಾಂಕ ಹಾಗೂ ನಯನಾ ವಿದ್ಯಾರ್ಥಿ ಸಮೂಹದೊಂದಿಗೆ ಸಂವಹನ ನಡೆಸಿ ಮಾಹಿತಿ ರವಾನಿಸಿದರು.

ಶಾಲೆಯ ಶಿಕ್ಷಕಿಯರಾದ ರೆನ್ನಿ ವಾಸ್ ಹಾಗೂ ಹೆಲೆನ್ ತಾವ್ರೋ ತಮ್ಮ‌ ಪೂರ್ಣ ಸಹಕಾರವನ್ನು ನೀಡಿದರು.

ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ. ಎಸ್. ಸಂಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿದರು.

Exit mobile version