ಗುರುವಾಯನಕೆರೆ: ಶಕ್ತಿನಗರದಲ್ಲಿರುವ ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸಲು ಎಂದು ಹೋಗುವಾಗ ರಸ್ತೆಯಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.
ಇಕೋ ಸ್ಪೋರ್ಟ್ ಕಾರು ಕಂದಕಕ್ಕೆ ಬಿದ್ದಿದ್ದು ಗೋವಿಂದೂರು ನಿವಾಸಿ ಅಶುತೋಷ್ ಗೆ ಸೇರಿದ ಕಾರು ಎನ್ನಲಾಗಿದೆ. ಚಾಲಕ ಅಶುತೋಷ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕಾರನ್ನು ಮೇಲಕ್ಕೆತ್ತಿದರು.