Site icon Suddi Belthangady

ಕೆ. ಎಂ. ಜೆ. ಬೆಳ್ತಂಗಡಿ ಝೋನ್ ಸದಸ್ಯತ್ವ ಅಭಿಯಾನ – ಪುನರ್ ರಚನೆ ಕಾರ್ಯಾಗಾರ

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಕೆ. ಎಂ. ಜೆ ಬೆಳ್ತಂಗಡಿ ಝೋನ್ ಇದರ ಸದಸ್ಯತ್ವ ಅಭಿಯಾನ ಹಾಗೂ ಪುನರ್ ರಚನೆ ಕಾರ್ಯಾಗಾರ ತರಬೇತಿ ಕಾರ್ಯಕ್ರಮ ಝೋನ್ ಅಧ್ಯಕ್ಷರಾದ ಎಸ್. ಎಂ. ಎ. ಅಧ್ಯಕ್ಷ ಸೆಯ್ಯದ್ ಎಸ್. ಎಂ. ಕೋಯ ತಂಙಳ್ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಡಿ. 26 ರಂದು ಜರಗಿತು.

ಎಸ್. ವೈ. ಎಸ್ ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಕಾರ್ಯಗಾರ ನಡೆಸಿಕೊಟ್ಟರು. ಸೆಯ್ಯೆದ್ ಸರಫುದ್ದೀನ್ ತಂಙಳ್ ವೇಣೂರು ನೆರವೇರಿಸಿದರು. ಕೆ. ಎಂ. ಜೆ ಜಿಲ್ಲಾ ಕಾರ್ಯದರ್ಶಿ ಕಾಸಿಂ ಪದ್ಮುಂಜ ಕಾರ್ಯಕ್ರಮ ಉದ್ಘಾಟಿಸಿದರು.

ವಿವಿಧ ಘಟಕಗಳ ಕೆ. ಎಂ. ಜೆ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀ ಸ್ವಾಗತಿಸಿದರು. ಕಾರ್ಯದರ್ಶಿ ಇಬ್ರಾಹಿಂ ಧನ್ಯವಾದ ಸಲ್ಲಿಸಿದರು.

Exit mobile version