Site icon Suddi Belthangady

ಗುರುವಾಯನಕೆರೆ ಪರಿಶೀಲನೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ – “ಆದಷ್ಟು ಬೇಗ ಹೂಳೆತ್ತುವ ಕೆಲಸ ಆಗಬೇಕು”

ಗುರುವಾಯನಕೆರೆ: ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಡಿ. 26 ರಂದು ಬೆಳ್ತಂಗಡಿಯ ಗುರುವಾಯನಕೆರೆಗೆ ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಸುದ್ದಿ ನ್ಯೂಸ್ ಜೊತೆ ಮಾತನಾಡಿದ ಲೋಕಾಯುಕ್ತರು, ಕೆರೆಯ ಬಗ್ಗೆ ನನಗೆ ಈಗಾಗಲೇ ದೂರು ಬಂದಿದೆ. ಇಲ್ಲಿ ಹತ್ತು ವರ್ಷದಿಂದ ಹೂಳೆತ್ತುವ ಕೆಲಸ ಆಗಿಲ್ಲ, ಆದಷ್ಟು ಬೇಗ ಹೂಳೆತ್ತುವ ಕೆಲಸ ಆಗಬೇಕು. ಬೇಲಿ ಹಾಕುವ ಕೆಲಸ ಆಗಬೇಕು ಎಂದು ಹೇಳಿದರು.

ಕೆರೆಯ ಸುತ್ತಮುತ್ತಲಿನ ಶುಚಿಯಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಕೂಡ ಹೌದು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಸ್ಥಳದಲ್ಲಿಯೇ ತಹಶೀಲ್ದಾರ್ ಪೃಥ್ವಿ ಸಾನಿಕಂರಿಗೆ ಸೂಚನೆ ಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್, ತಕ್ಷಣ ರೀ ಸರ್ವೆ ಮಾಡಿ ಕೆರೆ ಒತ್ತುವರಿ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಹೇಳಿದರು.

ಇನ್ನು ಸುದ್ದಿ ಜೊತೆ ಮಾತನಾಡಿದ ತಹಶೀಲ್ದಾರ್ ಪೃಥ್ವಿ ಸಾನಿಕಂ, ” ಹತ್ತು ದಿನದ ಒಳಗಡೆ ಸರ್ವೆ ಮಾಡಿ ಎಸ್ಟಿಮೇಷನ್ ತಯಾರು ಮಾಡಿ ಹೂಳೆತ್ತುವ ಕೆಲಸ ಮಾಡ್ತೀವಿ, ಅದರ ಜೊತೆ ಒತ್ತುವರಿ ಕುರಿತಾಗಿಯೂ ತನಿಖೆ ಮಾಡುತ್ತೇವೆ ” ಎಂದು ಹೇಳಿದರು.

Exit mobile version