Site icon Suddi Belthangady

ನಿವೃತ್ತ ಶಿಕ್ಷಕ ಕೆ. ಬಾಬು ಪೂಜಾರಿ ನಿಧನ

ಅಳದಂಗಡಿ: ಪ್ರೌಢ ಶಾಲಾ ನಿವೃತ್ತ ಶಿಕ್ಷಕ, ತೆಂಕಕಾರಂದೂರು ಗ್ರಾಮದ ಆಲಡ್ಕ ನಿವಾಸಿ ಕೆ. ಬಾಬು ಪೂಜಾರಿ (78ವ) ಅಲ್ಪ ಕಾಲದ ಅಸೌಖ್ಯದಿಂದ ಡಿ. 26 ರಂದು ಬೆಳಗ್ಗಿನ ಜಾವ ಸ್ವ ಗೃಹದಲ್ಲಿ ನಿಧನರಾದರು.

ಅಳದಂಗಡಿ ಪ್ರೌಢ ಶಾಲೆಯಲ್ಲಿ ಹಲವು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಸೇವೆಯಿಂದ ನಿವೃತ್ತಿಯಾಗಿದ್ದರು.

ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದ ಇವರು ಸಾಧು ಮೃದು, ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು. ನಿವೃತ್ತಿ ಬಳಿಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಕೃಷಿಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಮೃತರು ಪತ್ನಿ ಪುಷ್ಪಲತಾ, ಪುತ್ರಿ ಪ್ರಿಯಾಂಕರನ್ನು ಅಗಲಿದ್ದಾರೆ.

Exit mobile version