ಕಾಯರ್ತಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಕಳೆಂಜ ಶಾಲೆಯ ಶತಮಾನೋತ್ಸವ 2026 ರ ಜ. 19 ರಂದು ಆಚರಣೆಗೆ ಸಿದ್ದವಾಗುತ್ತಿದ್ದೂ ಇದರ ವಿಜ್ಞಾಪನೆ ಪತ್ರವನ್ನು ಬೆಳ್ತಂಗಡಿ ಪ್ರವಾಸಿಮಂದಿರದಲ್ಲಿ ಡಿ. 25 ರಂದು ಶಾಸಕ ಹರೀಶ್ ಪೂಂಜಾ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಹೆಚ್., ಉಪಾಧ್ಯಕ್ಷ ಜೋಸೆಫ್ ಕೆ. ಡಿ., ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರಸನ್ನ ಎ. ಪಿ., ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಗುರುಗಳಾದ ಕೃಷ್ಣಪ್ಪ ಟಿ., ಚಿಗುರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ, ಪಂಚಾಯತ್ ಸದಸ್ಯ ಹರೀಶ್ ಕೊಯ್ಲಾ, ಹಿರಿಯ ವಿದ್ಯಾರ್ಥಿ ಸಂಘದ ಪ್ರ. ಕಾರ್ಯದರ್ಶಿ ವಿಜಯ ಕೆ., ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಬಿಜೋಯ್, ಶತಮಾನೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಮ್ಯಾತ್ಯು ವಿ. ಟಿ., ಸದಸ್ಯರಾದ ಗಣೇಶ್ ಎಂ., ಶೇಖರ್ ಗೌಡ, ಮಧು ಉಪಸ್ಥಿತರಿದ್ದರು.