Site icon Suddi Belthangady

ಉಜಿರೆ: ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ – ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಹಿರಿಯ ವ್ಯಕ್ತಿಗಳ ಗೌರವಾರ್ಪಣೆ

ಉಜಿರೆ: ನಮಗೆ ಸದಾ ಮಾರ್ಗದರ್ಶಕರು. ಅವರ ಆಹಾರ ಪದ್ದತಿ, ನಡೆ ನುಡಿ, ಅಧ್ಯಾತ್ಮಿಕ ಸಂಗತಿಗಳು ವಿಶಿಷ್ಟವಾದುದು. ಇದರಿಂದಾಗಿಯೇ ಅವರು ಇಂದೂ ನಮ್ಮೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ.

ಇವರು ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದು ಮೂಡಬಿದಿರೆಯ ಬೆಳುವಾಯಿ ಮೂಳಿಯಾರಿನ ತನ್ನ 92 ವರ್ಷದ ವಯಸ್ಸಿನಲ್ಲೂ ಕ್ರೀಯಾಶೀಲರಾಗಿರುವ ಬಾಜಿಲ್ ರೇಗೊರನ್ನು ಅವರ ಪತ್ನಿಯೊಂದಿಗೆ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಅವರ ನಿವಾಸದಲ್ಲಿ ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘದ ವತಿಯಿಂದ ಸನ್ಮಾನಿಸುತ್ತಾ ಅದರ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಹಾಗೂ ಮೂಡಬಿದಿರೆ ತಾಲೂಕಿನ ವಿವಿಧ ಧರ್ಮಕೇಂದ್ರಗಳ ವ್ಯಾಪ್ತಿಯ ತಮ್ಮ ಜೀವನದಲ್ಲಿ 80 ಸವಂತ್ಸರಗಳನ್ನು ಪೂರೖಸಿದ 18 ಮಂದಿ ಹಿರಿಯ ವ್ಯಕ್ತಿಗಳನ್ನು ಅವರವರ ನಿವಾಸದಲ್ಲಿ ಭೇಟಿಯಾಗಿ ಅವರ ಕುಟುಂಬದ ಸದಸ್ಯರೊಂದಿಗೆ ಶಾಲು ಹೊದಿಸಿ ಫಲ, ಫುಷ್ಪ, ಹಾರ ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸಲಾಯಿತು. ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು.

ನಮ್ಮ ಜೀವನದಲ್ಲಿ ಇಂತಹ ಕಾರ್ಯಕ್ರಮ ಸಹಕಾರ ಸಂಘವೊಂದು ಹಮ್ಮಿಕೊಂಡಿರುವುದು ಪ್ರಥಮವಾಗಿ ನೋಡಲು ನಮಗೆ ಬಹಳ ಖುಷಿಯಾಗಿದೆ. ಮಾತ್ರವಲ್ಲ ನಮಗೆ ಈ ರೀತಿಯ ಸನ್ಮಾನ ದೊರಕಿರುವುದು ಸಹ ಇದೇ ಮೊದಲು ಎಂದು ಸನ್ಮಾನ ಸ್ವೀಕರಿಸಿದ ಹೆಚ್ಚಿನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂಘದ ಮೇಲೆ ದೇವರ ಆಶೀರ್ವಾದ ಬೇಡಿದರು. ಅವರ ಕುಟುಂಬದ ಸದಸ್ಯರೂ ತಮ್ಮ ಮನೆಯ ಹಿರಿಯರಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸುನಿಲ್ ಸಂತೋಷ್ ಮೊರಾಸ್, ಫೆಲಿಕ್ಸ್ ಡಿಸೋಜ, ಮೇಬಲ್ ಪ್ಲಾವಿಯಾ ಕ್ರಾಸ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಮತ್ತು ಸಿಬಂದಿ ವಿನೋಲ್ ಕ್ರಾಸ್ತಾ ಭಾಗವಹಿಸಿದ್ದರು.

Exit mobile version