Site icon Suddi Belthangady

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಗುಡ್ಡಕ್ಕೆ ಬೆಂಕಿ

ಮುಂಡಾಜೆ: ವಿದ್ಯುತ್ ಲೈನ್ ನ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಗುಡ್ಡಕ್ಕೆ ಬೆಂಕಿ ಬಿದ್ದ ಪ್ರಕರಣ ಕಡಂಬಳ್ಳಿಯಲ್ಲಿ ಡಿ. 24 ರಂದು ನಡೆದಿದೆ.

ಮರ ವಿದ್ಯುತ್ ಲೈನ್ ಮತ್ತು ರಸ್ತೆ ಮೇಲೆ ಉರುಳಿ ಬಿದ್ದಾಗ ಎರಡು ಎಲ್. ಟಿ. ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಈ ವೇಳೆ ಬೆಂಕಿ ಉತ್ಪತ್ತಿಯಾಗಿ ಸುಮಾರು 1 ಎಕರೆಯಷ್ಟು ಗುಡ್ಡ ಪ್ರದೇಶ ಸುಟ್ಟು ಹೋಗಿದೆ.

ಗುಡ್ಡದ ಸಮೀಪದಲ್ಲಿ ರಬ್ಬರ್ ತೋಟವಿದ್ದು ಅಲ್ಲಿಗೆ ಬೆಂಕಿ ಪಸರಿಸದಂತೆ ಸ್ಥಳೀಯರು ಸಹಕರಿಸಿದರು. ರಬ್ಬರ್ ತೋಟಕ್ಕೆ ಬೆಂಕಿ ಪಸರಿಸುತ್ತಿದ್ದರೆ ಹೆಚ್ಚಿನ ನಷ್ಟ ಉಂಟಾಗುತ್ತಿತ್ತು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಮೆಸ್ಕಾಂನವರು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version