ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಡಿ. 24 ರಂದು ಸಂಭ್ರಮದ ಕ್ರಿಸ್ ಮಸ್ ಹಬ್ಬ ಆಚರಿಸಲಾಹಿತು. ಸಂಜೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಏಸು ಕ್ರಿಸ್ತರು ಹುಟ್ಟಿದ ಗಾಯನಗಳು ಹಾಡಿ ಏಸು ಕ್ರಿಸ್ತರ ಜನದ ಸಂಭ್ರಮ ಪ್ರಾರಂಭವಾಯಿತು.
ದಿವ್ಯ ಬಲಿ ಪೂಜೆ ಮಂಗಳೂರಿನ ಜೆಪ್ಪು ಸೆಮಿನಾರಿಯ ಧರ್ಮ ಗುರು ವಂ. ಫಾ. ಐವನ್ ಡಿಸೋಜಾ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ನಾವೆಲ್ಲರೂ ಸಹೋದರತೆಯಿಂದ ಬಾಳಿ ಪರರಿಗೂ ಪ್ರೀತಿ ವಿಶ್ವಾಸದಿಂದ ನೆಲೆಸಬೇಕು. ನಾವು ನೀಡಿದ ಧಾನ ಧರ್ಮ ಗುಪ್ತವಾಗಿರಬೇಕೇ ಹೊರತು ಹತ್ತಾರು ಜನರಿಗೆ ಪ್ರಚಾರ ಪಡಿಸುವದಲ್ಲ ಮತ್ತು ಸಹಾಯ ಮಾಡಿದವರಿಂದ ಯಾರು ಪ್ರತಿಫಲ ನಿರೀಕ್ಷಿಸಬಾರದು. ಆವಾಗ ಮಾತ್ರ ಕ್ರಿಸ್ತ ಜನ್ಮ ದಿನ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಚರ್ಚ್ ಪ್ರಧಾನ ಧರ್ಮ ಗುರು ವಂ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ದಿವ್ಯ ಬಲಿ ಪೂಜೆಯಲ್ಲಿ ಭಾಗವಿಸಿದ್ದರು. ಭಕ್ತಾದಿಗಳೆಲ್ಲರೂ ಏಸು ಸ್ವಾಮಿಯ ಮೂರ್ತಿಗೆ ಭಕ್ತಿಯಿಂದ ನಮಿಸಿದರು.
ದಾನಿಗಳಿಗೆ ಮೇಣದ ಬತ್ತಿ ವಿತರಿಸಲಾಹಿತು. ಐ. ಸಿ. ವೈ. ಎಂ. ಸಂಘದಿಂದ ಕೇಕ್ ಡ್ರಾ, ಸಾಂತಾಕ್ಲಾಸ್, ಸುಡು ಮದ್ದು ಪ್ರದರ್ಶನ ನಡೆಯಿತು. ಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ದಾನಿಗಳ ನೆರವಿನಿಂದ ಸಹ ಭೋಜನ ಏರ್ಪಡಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸರ್ವ ರೀತಿಯಲ್ಲಿ ಸಹಕರಿಸಿದರು.