Site icon Suddi Belthangady

ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ ಮಸ್ ಆಚರಣೆ

ಬೆಳ್ತಂಗಡಿ: ದ. ಕ ಸಹಿತ ನಾಲ್ಕುಜಿಲ್ಲೆಗೆ ಒಳಪಟ್ಟಂತೆ ಬೆಳ್ತಂಗಡಿಯಲ್ಲಿರುವ ಸಂತ ಲಾರೆನ್ಸ್ ಪ್ರಧಾನ ದೇವಾಲಯದಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ರೆ. ಬಿಷಪ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ಕ್ರಿಸ್ ಮಸ್ ಹಬ್ಬದ ಪೂರ್ವವಾಗಿ ಡಿ. 24 ರಂದು ಸಂಜೆ 7 ಕ್ಕೆ ದಿವ್ಯಬಲಿಪೂಜೆ ನೆರವೇರಿಸಿದರು.

ಯೇಸುವಿನ ಜನನ ಸಂದೇಶ ಸಾರುವ ಗೋದಲಿ ಉದ್ಘಾಟನೆ, ಬಾಲ ಏಸುವಿನ ಪ್ರತಿಮೆ ಮೆರವಣಿಗೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ವಿಕಾರ್‌ ಫಾ. ತೋಮಸ್ ಕಣ್ಣಾಂಕಲ್, ಫಾ. ಅಬ್ರಹಾಂ ಪಟೇರಿಲ್ ಜತೆಗಿದ್ದರು. ಚರ್ಚ್ ವ್ಯಾಪ್ತಿಗೆ ಒಳಪಟ್ಟಂತೆ 700 ಕ್ಕೂ ಅಧಿಕ ಮಂದಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಧರ್ಮಪ್ರಾಂತ್ಯಕ್ಕೆ ಒಳಪಟ್ಟಂತೆ ತಾಲೂಕಿನ 55 ಚರ್ಚ್‌ಗಳಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಪೂಜೆ ನೆರವೇರಿತು.

Exit mobile version