ಮಡಂತ್ಯಾರು: ಜೆ. ಸಿ. ಐ ಘಟಕದ 2024 ರ ಅಧ್ಯಕ್ಷರಾದ ಜೆ. ಸಿ ಹೆಚ್. ಜಿ. ಎಫ್. ವಿಕೇಶ್ ಮಾನ್ಯ 2025 ನೇ ಸಾಲಿನ ಜೆ. ಸಿ. ಐ ಭಾರತದ ವಲಯ 15 ರ ವ್ಯವಹಾರ ಡೈರೆಕ್ಟರಿಯ ವಲಯ ಸಂಯೋಜಕರಾಗಿ ಕುಂದಾಪುರದಲ್ಲಿ ನಡೆದ ವಲಯಾಡಳಿತ ಮಂಡಳಿಯ ಪದಪ್ರಧಾನ ಸಮಾರಂಭದಲ್ಲಿ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಜೆ. ಸಿ. ಐ 2024 ರ ಘಟಕಾಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಅದ್ದೂರಿ ಜೆ. ಸಿ ಸಪ್ತಾಹವನ್ನು ಆಯೋಜಿಸಿ ಘಟಕಕ್ಕೆ ವಲಯ ಮನ್ನಣೆ ಲಭಿಸಿದೆ. ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.