ಬೆಳ್ತಂಗಡಿ: ವಕೀಲರ ಸಂಘ ಮತ್ತು ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ಸಹಯೋಗದಲ್ಲಿ ಇಂಪಾರ್ಟೆನ್ಸ್ ಆಫ್ ಫಾರೆನ್ಸಿಕ್ಸ್ ಇನ್ ಲಿಟಿಗೇಷನ್ ಎಂಬ ವಿಷಯದ ಬಗ್ಗೆ ವಕೀಲರಿಗೆ ಕಾನೂನು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ನಿರ್ದೇಶಕ ಫನೀಂದರ್ ಬಿ. ಎನ್. ಈ ಕಾನೂನಿನ ಬಗ್ಗೆ ಅರ್ಥವತ್ತಾಗಿ ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಮನು ಬಿ. ಕೆ., ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ್ ಕೆ. ಮತ್ತು ಹೆಚ್ಚುವರಿ ನ್ಯಾಯಾಧೀಶ ವಿಜಯೇಂದ್ರ ಟಿ. ಹೆಚ್. ಉಪಸ್ಥಿತರಿದ್ದರು.
ಈ ಕಾರ್ಯಗಾರದಲ್ಲಿ ಬೆಳ್ತಂಗಡಿಯ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ಸರಕಾರಿ ವಕೀಲರು, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಗಾರದ ನಿರೂಪಣೆಯನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ. ನಿರ್ವಹಿಸಿದರು.