Site icon Suddi Belthangady

ಜ. 5 ನೂತನ ತಂಡ ಉದ್ಘಾಟನಾ ಸಮಾರಂಭ – ಮಾತೆ ಸಾವಿತ್ರಿ ಬಾ ಪುಲೆಯವರ ಜನ್ಮ ದಿನಾಚರಣೆ – ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

ಬೆಳ್ತಂಗಡಿ: ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಭೂಮಿಗೆ ಸಂಬಂಧಿಸಿದ ಪರಿಕಲ್ಪನೆಯನ್ನು ಇಟ್ಟುಕೊಂಡು ಹೊಸದಾದ ಒಂದು ಯೋಜನೆಯೊಂದಿಗೆ ಜ. 5 ರಂದು “ನೂತನ ತಂಡದ ಉದ್ಘಾಟನಾ ಸಮಾರಂಭ” ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾಜಸೇವಾ ಮನೋಭಾವನೆಯ ಜೊತೆಗೆ ಆರ್ಥಿಕವಾಗಿ ಹಿಂದುಳಿದಿರುವ ಜನರನ್ನು ಸದೃಡಗೊಳಿಸುವ ಉದ್ದೇಶದೊಂದಿಗೆ ಸ್ವಾವಲಂಬನೆಯನ್ನು ಉತ್ತೇಜಿಸಿ ಜನರಿಗೆ ಅರಿವನ್ನು ಮೂಡಿಸುತ್ತಾ, ಸಮಾಜ ಪರಿವರ್ತನಾ ಮುಖಂಡರ ಆಶಯವನ್ನು ಮುಂದುವರಿಸುತ್ತಾ, ಸಮಾಜಮುಖಿ, ಪರಿಸರಕ್ಕೆ ಪೂರಕವಾಗುವ ಅನೇಕ ವಿಚಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಹೊಸ ಚಿಂತನೆಯೊಂದಿಗೆ ಈ ತಂಡ ಆರಂಭವಾಗಲಿದೆ.

ಜ. 5 ರಂದು ಬಂಟ್ವಾಳ ಎಸ್. ವಿ. ಎಸ್ ಪ್ರೌಢಶಾಲಾ ಶಿಕ್ಷಕಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆ. ಸೋಮನಾಥ ನಾಯಕ್ ಅಧ್ಯಕ್ಷರು ನಾಗರೀಕ ಸೇವಾ ಟ್ರಸ್ಟ್ ಗುರುವಾಯನಕೆರೆ, ಹೆಡ್ ಕಾನ್ಸ್ ಟೇಬಲ್ ವೆಂಕಪ್ಪ ಪಿ. ಎಸ್., ಭೀಮ್ ಆರ್ಮಿ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಚಿತ್ರಕಲೆ: ಬೆಳಿಗ್ಗೆ 9 ರಿಂದ 10 ರವರೆಗೆ, 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ, ವಿಷಯ: ಪರಿಸರ, ಪೆನ್ಸಿಲ್ ಹಾಗೂ ಡ್ರಾಯಿಂಗ್ ಶೀಟ್ ನೀಡಲಾಗುವುದು.

ರಸಪ್ರಶ್ನೆ: ಬೆಳಿಗ್ಗೆ 9 ರಿಂದ 9.45 ರವರೆಗೆ, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ, 25 ಪ್ರಶ್ನೆಗಳಿರುವ ಪ್ರಶ್ನೆಗೆ ಟಿಕ್ ಹಾಕಿ ಉತ್ತರಿಸುವುದು.

ಸಮೂಹ ಜಾನಪದ ಗೀತೆ: ಸಾರ್ವಜನಿಕರಿಗೆ ( ಬೆಳಿಗ್ಗೆ10 ಕ್ಕೆ) ಕನ್ನಡ ಜಾನಪದ ಗೀತೆಯಾಗಿರಬೇಕು, ಗರಿಷ್ಠ 5 ಜನ ಕನಿಷ್ಟ 2 ಜನ, 3+1=4 ನಿಮಿಷ, ಜಾನಪದ ಗೀತೆಗೆ ಮೊದಲು ಬಂದ 10 ತಂಡಗಳಿಗೆ ಮಾತ್ರ ಅವಕಾಶ.

ಈ ಎಲ್ಲಾ ಸ್ಪರ್ಧೆಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಗುವುದು.

ಜಾನಪದ ಗೀತೆಗೆ ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ: 6366732646, 9902621682 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Exit mobile version