ಮಚ್ಚಿನ: ಒಕ್ಕೂಟದ ಅಧ್ಯಕ್ಷೆ ವಿದ್ಯಾ ಎಮ್. ಹೆಚ್. ಅಧ್ಯಕ್ಷತೆಯಲ್ಲಿ ಒಕ್ಕೂಟದ ಮಹಾಸಭೆಯನ್ನು ಡಿ. 23 ರಂದು ನಡೆಸಲಾಯಿತು. ಕೃಷಿ ಸಖಿ ವಿಜಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಮಹಾಸಭೆಯು ಏಲ್. ಸಿ. ಆರ್. ಪಿ. ಶ್ವೇತ ಸ್ವಾಗತದೊಂದಿಗೆ ಮುಂದುವರೆಯಿತು.
ಪಂಚಾಯತ್ ಅಧ್ಯಕ್ಷರು ದೀಪ ಪ್ರಜ್ವಲಿಸುವ ಮೂಲಕ ಸಭೆಗೆ ಚಾಲನೆಯನ್ನು ನೀಡಿದರು. ಉದ್ಘಾಟಕರ ಮಾತಿನೊಂದಿಗೆ ಆರಂಭಗೊಂಡ ಸಭೆಯ ವರದಿಯನ್ನು ಕಾರ್ಯದರ್ಶಿ ಅನಿತಾ ಪೆರ್ನಾಂಡಿಸ್ ಮಂಡಿಸಿದರು. ಜಮಾ ಖರ್ಚಿನ ವಿವರವನ್ನು ಬ್ಯಾಂಕ್ ಸಖಿ ಶ್ರೀಕಲ ನೆರವೇರಿಸಿದರು. ಸಿ. ಎ. ಆಡಿಟ್ಟು ರಿಪೋರ್ಟ್ ನ್ನು ಉಪಾಧ್ಯಕ್ಷೆ ಅಕ್ಷತಾ ಮಂಡಿಸಿದರು.
ಈ ಮಹಾಸಭೆಯ ಅಂಗವಾಗಿ ಡಿ. 12 ರಂದು ನಡೆದ ವಾರ್ಡ್ ಸಭೆ ಹಾಗೂ ಮಹಾಸಭೆಯ ಪೂರ್ವಭಾವಿ ಸಭೆಯ ನಂತರ ಕೆಲವು ಸಿಂಪಲ್ ಗೇಮ್ಸ್ ಗಳನ್ನು ಸದಸ್ಯರಿಗೆ ಇಡಲಾಗಿತ್ತು. ಇದರ ಬಹುಮಾನ ವಿತರಣೆಯನ್ನು ಈ ವೇದಿಕೆಯಲ್ಲಿ ನೆರವೇರಿಸಲಾಯಿತು.
ವಲಯ ಮೇಲ್ವಿಚಾರಕಿ ವೀಣಾ ಮೇಡಂ ಒಕ್ಕೂಟವು ಹೇಗೆ ಇರಬೇಕು, ಒಕ್ಕೂಟದಿಂದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನಗಳಿವೆ, ಬ್ಯಾಂಕಿನಲ್ಲಿ ಯಾವ ತರದ ಸಾಲ ಸೌಲಭ್ಯಗಳಿವೆ, ಸಂಘದ ಸದಸ್ಯರು ಯಾವೆಲ್ಲ ರೀತಿಯಲ್ಲಿ ಸ್ವ-ಉದ್ಯೋಗವನ್ನು ನಡೆಸಬಹುದೆಂದು ಸವಿಸ್ತಾರವಾಗಿ ವಿವರಿಸಿದ್ದರು.
ಮುಂದಕ್ಕೆ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ನಮ್ಮ ಒಕ್ಕೂಟ ಆರಂಭ ಆದಾಗಿನಿಂದ ಇಲ್ಲಿಯವರೆಗೆ ನಮ್ಮೊಂದಿಗಿದ್ದು ಸದಸ್ಯತ್ವದಿಂದ ನಿರ್ಗಮಿಸುವ ಸದಸ್ಯರುಗಳಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಒಕ್ಕೂಟದ ಸದಸ್ಯತ್ವದಿಂದ ನಿರ್ಗಮಿಸುವ ಸದಸ್ಯರುಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಒಕ್ಕೂಟದಲ್ಲಿ ಸಿ. ಐ. ಎಫ್ ಸಾಲ ಪಡೆದು ಉತ್ತಮ ಸಾಧಕಿ ಎಂದು ಗುರುತಿಸಿ ಅನಿತಾ ಗೀತಾ ಫರ್ನಾಂಡಿಸ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಒಕ್ಕೂಟದಲ್ಲಿರುವ ಸಂಘಗಳಲ್ಲಿ ಉತ್ತಮ ಸಂಘ ಎಂಬ ಟೈಟಲ್ ನೊಂದಿಗೆ ಎರಡು ಸಂಘಗಳನ್ನು ಗುರುತಿಸಿ ಉತ್ತಮ ಸಂಘ ಎಂಬ ಸ್ಮರಣಿಕೆ ನೀಡಲಾಯಿತು. ನಮ್ಮ ಒಕ್ಕೂಟದ ಎಲ್. ಸಿ. ಆರ್. ಪಿ. ಶ್ವೇತಾ ತಯಾರಿಸಿದ ಫಿನೈಲ್ ಹಾಗೂ ಶ್ರೀದೇವಿ ಶ್ರೀ ಶಕ್ತಿ ಸಂಘದ ಸದಸ್ಯೆ ಆರತಿ ತಯಾರಿಸಿದ ಫಿನೈಲ್ ಹಾಗೂ ಸೋಪ್ ಆಯಿಲ್ ನ್ನು ಸಭೆಯಲ್ಲಿ ಲಾಂಚ್ ಮಾಡಲಾಯಿತು. ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಒಕ್ಕೂಟದ ಕೇಂದ್ರ ಬಿಂದು ಆಗಿರುವಂತಹ ವಿದ್ಯಾ ಎಂ. ಹೆಚ್. ಉತ್ತಮ ರೀತಿಯಲ್ಲಿ ತಮ್ಮ ಅಧ್ಯಕ್ಷೀಯ ಮಾತನಾಡಿದರು. ಎಂ. ಬಿ. ಕೆ. ನಿಶಾಲತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್. ಸಿ. ಆರ್. ಪಿ. ಪುಷ್ಪಾ ನಡೆದಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದವನ್ನಿತ್ತು, ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.