Site icon Suddi Belthangady

ಜೆ. ಸಿ. ಐ ಭಾರತದ ವಲಯ 15 ರ ಪ್ರತಿಷ್ಠಿತ ಘಟಕ – ಜೆ. ಸಿ. ಐ ಬೆಳ್ತಂಗಡಿ: ಅಧ್ಯಕ್ಷರಾಗಿ ಜೇಸಿ ಆಶಾಲತಾ ಪ್ರಶಾಂತ್ ಆಯ್ಕೆ

ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಸಂಸ್ಥೆ ಜೆ. ಸಿ. ಐ ಇದರ 2025 ನೇ ಸಾಲಿನ ಘಟಕ ಆಡಳಿತ ಮಂಡಳಿಯ ಆಯ್ಕೆ ಸಭೆ ನ. 6 ರಂದು ಜೇಸಿ ಭವನದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಜೇಸಿ ರಂಜಿತ್ ಎಚ್. ಡಿ. ನಡೆಸಿಕೊಟ್ಟರು. ಚುನಾವಣಾ ಸಮಿತಿ ಅಧ್ಯಕ್ಷ ಘಟಕದ ನಿಕಟ ಪೂರ್ವ ಅಧ್ಯಕ್ಷ ಜೇಸಿ ಶಂಕರ್ ರಾವ್, ಸಮಿತಿ ಸದಸ್ಯರಾಗಿ ಜೇಸಿ ಪ್ರಸಾದ್ ಬಿ. ಎಸ್., ಜೇಸಿ ಅಭಿನಂದನ್ ಹರೀಶ್, ಜೇಸಿ ಸ್ವರೂಪ್ ಶೇಖರ್ ಆಯ್ಕೆ ಪ್ರಕ್ರಿಯೆ ನಡೆಸಿದರು.

ಘಟಕದ 2025 ನೇ ಸಾಲಿನ ಅಧ್ಯಕ್ಷರಾಗಿ ಲಾೖಲ ಗ್ರಾಮ ಪಂಚಾಯತ್ ಸದಸ್ಯೆ ಜೇಸಿ ಆಶಾಲತಾ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಹಾಗೂ ಕಾರ್ಯದರ್ಶಿಯಾಗಿ ಜೇಸಿ ಶೈಲೇಶ್ ಕೆ. ಆಯ್ಕೆಯಾಗಿರುತ್ತಾರೆ. ಮತ್ತು ಕೋಶಾಧಿಕಾರಿಯಾಗಿ ಜೇಸಿ ಪ್ರಮೋದ್ ಚಿಬಿದ್ರೆ ಹಾಗೂ ಮಹಿಳಾ ಜೇಸಿ ಸಂಯೋಜಕಾಗಿ ಜೇಸಿ ಚಿತ್ರಪ್ರಭ ಮತ್ತು ಜೇಸಿ ವಿದ್ಯಾರ್ಥಿ ಘಟಕದ ಚೈರ್ಮೆನ್ ಆಗಿ ಜೇಸಿ ದೀಪ್ತಿ ಕುಲಾಲ್ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಘಟಕದ ಪೂರ್ವ ಅಧ್ಯಕ್ಷ ಜೇಸಿ ಚಿದಾನಂದ ಇಡ್ಯಾ, ಜೇಸಿ ಸಂತೋಷ್ ಕೋಟ್ಯಾನ್ ಬಳಂಜ, ಜೇಸಿ ನಾರಾಯಣ ಶೆಟ್ಟಿ ಜೇಸಿ ಪ್ರಶಾಂತ್ ಲಾೖಲ ಹಾಗೂ ಘಟಕದ ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಡಿ. 20 ರಂದು ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಘಟಕ ಅಧ್ಯಕ್ಷ ಜೇಸಿ ರಂಜಿತ್ ಎಚ್. ಡಿ. ಮುಂದಿನ ಸಾಲಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದರು.

Exit mobile version