Site icon Suddi Belthangady

ಭಜನೆಯಿಂದ ಆತ್ಮಶುದ್ಧಿ, ಮನಶುದ್ಧಿ ಸಾಧ್ಯ – ಡಾ. ರವೀಶ್ ಪಡುಮಲೆ – ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಉಪ್ಪಿನಂಗಡಿ: ದೇವರನ್ನು ಭಕ್ತಿ ಮಾರ್ಗದ ಮೂಲಕ ಒಲಿಸಿಕೊಳ್ಳುವ ಸುಲಭ ವಿಧಾನವೇ ಭಜನೆ. ಭಜನೆಯ ಮೂಲಕ ದೇವರನ್ನು ಹತ್ತಿರದಿಂದ ಕಾಣಬಹುದಾಗಿದ್ದು, ಇದರಿಂದ ಆತ್ಮ ಶುದ್ಧಿ, ಮನ ಶುದ್ಧಿ ಸಾಧ್ಯವಾಗುತ್ತದೆ. ಭಜನೆಯಿದ್ದಲ್ಲಿ ವಿಘಟನೆ ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನೆಮನೆಯಲ್ಲಿಯೂ ಭಜನೆ ನಡೆದಾಗ ಧರ್ಮವೂ ಉಳಿಯಲು ಸಾಧ್ಯ ಎಂದು ದೈವ ನರ್ತಕ, ಉಜಿರೆ ಎಸ್‌. ಡಿ. ಎಂ ತಾಂತ್ರಿಕ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥ ಡಾ. ರವೀಶ್ ಪಡುಮಲೆ ಹೇಳಿದರು.

ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ 3 ನೇ ದಿನವಾದ ಡಿ. 20 ರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ನಮ್ಮ ನಂಬಿಕೆ ಮೂಲ ನಂಬಿಕೆ-ನಳಿನ್ ಕುಮಾರ್: ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ನಮ್ಮ ನಂಬಿಕೆಗಳು ಮೂಲನಂಬಿಕೆಗಳಾಗಿದ್ದು, ಸಂಸ್ಕಾರ, ನಂಬಿಕೆ, ಸನಾತನ ಆಚರಣೆಗಳ ಮೇಲೆ ಭಾರತ ದೇಶ ನಿಂತಿದೆ. ಬ್ರಹ್ಮಕಲಶೋತ್ಸವವೆನ್ನುವುದು ದೇವರ ಸಾನಿಧ್ಯಕ್ಕೆ ಚೈತನ್ಯ ತುಂಬುವ ಕೆಲಸ ಒಂದೆಡೆಯಾದರೆ, ಇದರಲ್ಲಿ ಎಲ್ಲರನ್ನೂ ಒಗ್ಗೂಡಿಸುವ, ಎಲ್ಲರನ್ನೂ ಬದುಕಿಸುವ ಚಿಂತನೆಯೂ ಇದೆ. ಸನಾತನ ಧರ್ಮದ ಆಚರಣೆ, ಸಂಸ್ಕಾರ, ನಂಬಿಕೆಗಳು ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೆ ದೇಶ ಸದೃಢ ಭಾರತವಾಗಿ ಉಳಿಯಲು ಸಾಧ್ಯ ಎಂದರು.

ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯವಾಗಬೇಕು-ಮಠಂದೂರು: ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜ ಪರಂಪರೆಯಿಂದ ಪ್ರಜಾ ಪರಂಪರೆ ವ್ಯವಸ್ಥೆಗೆ ನಾವು ಬಂದಿದ್ದೇವೆ. ಆದ್ದರಿಂದ ಈಗ ದೇವಾಲಯದ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯ ಪ್ರಜೆಗಳಿಂದ ಸಾಧ್ಯವಾಗುತ್ತದೆ. ಪ್ರಕೃತಿಯಲ್ಲಿ, ಕಲಾರಾಧನೆಯಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಆದ್ದರಿಂದ ಈ ಸಂಸ್ಕೃತಿ- ಸಂಸ್ಕಾರವನ್ನು ಮುಂದಿನ ಪೀಳಿಗೆಗೂ ಉಣಬಡಿಸುವ ಕಾರ್ಯ ನಮ್ಮೆಲ್ಲರಿಂದಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜಾರಾಮ ಕೆ. ಬಿ., ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾದಾಗ ಆತ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ. ನನ್ನ ಪೂರ್ವಜರು ಇಲ್ಲೇ ನೆಲೆಸಿದವರಾಗಿದ್ದು, ಆ ಮಣ್ಣಿನ ಬಾಂಧವ್ಯವೇ ನನ್ನನ್ನು ಇಲ್ಲಿಗೆ ಸೇವೆ ಸಲ್ಲಿಸಲು ಕರೆದುಕೊಂಡು ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಅವಿರತ ಸೇವೆ ಮಾಡಿದ ವಸಂತ ಕುಂಟಿನಿ ಹಾಗೂ ಹರೀಶ್ವರ ಮೊಗ್ರಾಲ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ದೇವಾಲಯದ ಅಡಳಿತ ಸಮಿತಿಯ ಅಧ್ಯಕ್ಷ ಉದಯಶಂಕರ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರತಾಪ್ ಯು. ಪೆರಿಯಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪಿ. ಪೆರಿಯಡ್ಕ, ಆರ್ಥಿಕ ಸಮಿತಿ ಸಂಚಾಲಕ ಧರ್ಣಪ್ಪ ನಾಯ್ಕ ಬೊಳ್ಳಾವು, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕಂಗ್ವೆ ವಿಶ್ವನಾಥ ಶೆಟ್ಟಿ ಅಮ್ಟೂರುಬಾಳಿಕೆ ಗುತ್ತು, ಹರೀಶ ನಟ್ಟಿಬೈಲು, ಚಿದಾನಂದ ಪಂಚೇರು, ಪ್ರಹ್ಲಾದ್ ಪೆರಿಯಡ್ಕ, ಸ್ವಾಗತ ಸಮಿತಿಯ ಸಂಚಾಲಕರಾದ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಸುಜಾತಕೃಷ್ಣ, ವಿಜಯಲಕ್ಷ್ಮೀ ಪೆರಿಯಡ್ಕ, ವೆಂಕಪ್ಪ ಪೂಜಾರಿ ಮರುವೇಲು, ಹೇಮಲತಾ ಶೆಟ್ಟಿ, ಜಯಂತಿ ಮಂಜುನಾಥ ಭಟ್, ಪ್ರಸಾದ ಸಮಿತಿಯ ಸಂಚಾಲಕರಾದ ಹರೀಶ್ವರ ಮೊಗ್ರಾಲ್, ಸದಸ್ಯರಾದ ವಸಂತಿ ಭಟ್ ರಂಗಾಜೆ, ರಾಮ ಭಟ್ ಬೊಳ್ಳಾವು, ದುರ್ಗಾಪ್ರಸಾದ್ ಬೊಳ್ಳಾವು, ಕೃಷ್ಣಪ್ರಸಾದ್ ಕೂವೆಚ್ಚಾರು, ಅಂಬಾಪ್ರಸಾದ ಪಾತಾಳ, ಸತೀಶ ರಾವ್ ನೆಡ್ಚಿಲು, ವೈದಿಕ ಸಮಿತಿಯ ಸಂಚಾಲಕ ಶಂಕರನಾರಾಯಣ ಭಟ್ ಬೊಳ್ಳಾವು, ಸತ್ಯನಾರಾಯಣ ಭಟ್ ರಂಗಾಜೆ, ಸದಸ್ಯರಾದ ಶಾಂತಾರಾಮ ಭಟ್ ಸೂರ‍್ಯಂಬೈಲು, ಶ್ರೀರಂಗ ಮೂಡೆತ್ತಾಯ, ಮಂಜುನಾಥ ಭಟ್ ಪೆರಿಯಡ್ಕ, ಕಾರ್ಯಾಲಯ ಸಮಿತಿಯ ಸಂಚಾಲಕ ಲೋಕೇಶ ಬೆತ್ತೋಡಿ, ಸದಸ್ಯರಾದ ಕೇಶವ ರಂಗಾಜೆ, ಮಹಾಲಿಂಗ ಕಜೆಕ್ಕಾರು, ರಾಜಶ್ರೀ ಬೆತ್ತೋಡಿ, ವೆಂಕಟ್ರಮಣ ಭಟ್ ಪೆರಿಯಡ್ಕ, ಪ್ರಮೀಳಾ ಹರೀಶ ಬೆತ್ತೋಡಿ, ಮಮತಾ ನೆಕ್ಕರೆ, ರಮ್ಯ ಕುಕ್ಕೆಮಜಲು, ಡೀಕಯ್ಯ ಗೌಂಡತ್ತಿಗೆ, ಲಿಖಿತ್ ಪ್ರಸಾದ್ ರಂಗಾಜೆ, ಸಂತೋಷ್ ಶೆಟ್ಟಿ ಕಜೆಕ್ಕಾರು, ನಿತಿನ್ ಕೊಡಂಗೆ, ಜಯಶ್ರೀ ಅತ್ರೆಮಜಲು, ಅಶ್ವಿನಿ ಪದಾಳ, ಸಮಿತ್ರಾ ಕೊಡಂಗೆ, ಮೀನಾಕ್ಷಿ ಬೊಳ್ಳಾವು, ಯಶ್ವಿತಾ ನೆಡ್ಚಿಲು, ಧನ್ಯಶ್ರೀ ಆರ್ತಿಲ, ಅಕ್ಷತಾ ಶೆಟ್ಟಿ ಮರುವೇಲು, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಹಾಲಿಂಗೇಶ್ವರ ಭಟ್, ಸದಸ್ಯರಾದ ಚೇತನ್ ಮೊಗ್ರಾಲ್, ಸುಕನ್ಯಾ ವಸಂತ ಕುಕ್ಕುಜೆ, ರಂಜಿತ್ ಪೆರಿಯಡ್ಕ, ವಿಮಲಾ ತೇಜಾಕ್ಷಿ, ಅನ್ನಸಂತರ್ಪಣೆ ಸಮಿತಿಯ ಸಂಚಾಲಕರಾದ ಪ್ರಶಾಂತ ಪೆರಿಯಡ್ಕ, ಶ್ರೀರಾಮ ಭಟ್ ಪಾತಾಳ, ಮುಣ್ಚಿಕಾನ ವೆಂಕಟ್ರಮಣ ಭಟ್, ಶಿವರಾಜ ಕುಂಟಿನಿ, ಸದಸ್ಯರಾದ ಹರಿಪ್ರಸಾದ್ ಕೂವೆಚ್ಚಾರು, ದಾಮೋದರ ಗೌಡ ಬೊಳ್ಳಾವು, ಶೀನಪ್ಪ ನಾಯ್ಕ ಆರ್ತಿಲ, ಉದಯ ಅತ್ರೆಮಜಲು, ಹರೀಶ ಕೊಡಂಗೆ, ವಿನೀತ್ ಅತ್ರಮಜಲು, ಹರೀಶ್ ಪಟ್ಲ, ಕಲಶ ಸಮಿತಿಯ ಸಂಚಾಲಕರಾದ ಬಿ. ರಾಧಾಕೃಷ್ಣ ಭಟ್ ಬೊಳ್ಳಾವು, ನೀರು ಸರಬರಾಜು ಸಮಿತಿಯ ಸಂಚಾಲಕ ಬಿ. ಜಗದೀಶ ಪರಕಜೆ, ಭಜನಾ ಸಮಿತಿಯ ಸಂಚಾಲಕ ಶೀನಪ್ಪ ಗೌಡ ಬೊಳ್ಳಾವು, ಆರೋಗ್ಯ ಸಮಿತಿಯ ಸದಸ್ಯರಾದ ಯಶೋದಾ, ವನಿತಾ ಕುಕ್ಕುಜೆ, ಪುಷ್ಪವಲ್ಲಿ ಪೆರಿಯಡ್ಕ, ಹೇಮಲತಾ ಆರ್ತಿಲ, ನಳಿನಿ ಮರುವೇಲು, ಧನವತಿ ಬೆತ್ತೋಡಿ, ವಾಹನ ಸಮಿತಿಯ ಸಂಚಾಲಕ ನೋಣಯ್ಯ ಗೌಡ ಬೊಳ್ಳಾವು, ಸದಸ್ಯರಾದ ಪದ್ಮನಾಭ ನೀರ್ಜಾಲು, ಸುರೇಶ ನಲಿಕೆಮಜಲು, ಸತೀಶ ಕಜೆಕ್ಕಾರು, ಚಂದ್ರಶೇಖರ ಕೋಡಿ, ಕೇಶವ ಬೊಳ್ಳಾವು, ಕರುಣಾಕರ ಬೊಳ್ಳಾವು, ದೇವಿಪ್ರಸಾದ್ ಬೊಳ್ಳಾವು, ಹರೀಶ ಬೊಳ್ಳಾವು, ಹೇಮಪ್ರಸಾದ್ ಬೊಳ್ಳಾವು, ಶ್ರೀನಿವಾಸ ಶೆಟ್ಟಿ ನೈಕುಳಿ ಮಠ, ಭದ್ರತಾ ಸಮಿತಿಯ ಶಿವಪ್ಪ ನಾಯ್ಕ ಷಣ್ಮುಖ ಪ್ರಸನ್ನ, ಸ್ವಯಂ ಸೇವಕ ಸಮಿತಿಯ ಸಂಚಾಲಕ ಚಿದಾನಂದ ಪಂಚೇರು, ಸದಸ್ಯರಾದ ರಾಜೇಶ ಕೊಡಂಗೆ, ಶ್ರೀನಿವಾಸ ಬೊಳ್ಳಾವು, ಸುಚಿತ್ ಬೊಳ್ಳಾವು, ಸತೀಶ ನೆಡ್ಚಿಲು, ಚರಣ್ ಬಲ್ಯಾರಬೆಟ್ಟು, ಪಾನೀಯ ವ್ಯವಸ್ಥೆಯ ಸಂಚಾಲಕರಾದ ಭವ್ಯ ನಿತಿನ್ ಬೊಳ್ಳಾವು, ಸದಸ್ಯರಾದ ಶ್ರುತಿ ಕೊನೆತೋಟ, ವನಿತಾ ನೆಡ್ಚಿಲು, ರೋಹಿಣಿ ಪಟ್ಲ, ಭವಾನಿ ಪುಳಿತ್ತಡಿ, ಗಿರಿಜಾ ಪಟ್ಲ, ಸುನಂದಾ ಬೊಳ್ಳಾವು, ಶೀಲಾವತಿ ಕೊನೆತೋಟ, ಜಯಂತಿ ರಂಗಾಜೆ, ವನಿತಾ ಆರ್ತಿಲ, ಮಲ್ಲಿಕಾ ಉದಯ ಅತ್ರೆಮಜಲು, ಅಶ್ವಿನಿ ಕಂಪ, ಲಲಿತಾ ಕೊಪ್ಪಳ, ಪ್ರೇಮಲತಾ ಕೊಪ್ಪಳ, ಸವಿತಾ ಕೊಪ್ಪಳ, ಭಾರತಿ ಕಜೆಕ್ಕಾರು, ಸುಶೀಲಾ ಕೊಪ್ಪಳ, ಹರಿಣಾಕ್ಷಿ ಪೆರಿಯಡ್ಕ, ಸುಜಾತ ಪೆರಿಯಡ್ಕ, ತೇಜಾವತಿ ಅಲ್ತಿಮಾರ್, ಹರೀಶ ನೆಡ್ಚಿಲು, ಸೀತಾರಾಮ ಪಂಚೇರು, ವೀಣಾ ಬೊಳ್ಳಾವು, ಗುಲಾಬಿ ಬೊಳ್ಳಾವು, ದಿಶಾ ರಂಗಾಜೆ, ಜಯಶ್ರೀ ರಂಗಾಜೆ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷ, ದೀಕ್ಷಾ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಸ್ವಾಗತಿಸಿದರು. ಚೇತನ್ ಮೊಗ್ರಾಲ್, ಶ್ರೀಧರ ಭಟ್, ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿಯ ಸದಸ್ಯರಾದ ಆನಂದ ಕುಂಟಿನಿ ವಂದಿಸಿದರು.

ನಾಗ ಪ್ರತ್ಯಕ್ಷ: ಶ್ರೀ ಸುಬ್ರಹ್ಮಣ್ಯ ದೇವರ ಆರಾಧನೆ ಹಾಗೂ ನಾಗಾರಾಧನೆ ನಡೆಯುವ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವದ 2 ನೇ ದಿನ ಡಿ. 19 ರಂದು ದೇವಾಲಯದ ಮುಂಭಾಗದಲ್ಲಿರುವ ರಾಜಬೀದಿಯ ನಾಗನ ಕಟ್ಟೆಯ ಬಳಿ ನಾಗರ ಹಾವೊಂದು ಸಂಚರಿಸುತ್ತಿರುವುದು ಕಂಡು ಬಂತು. ಇದನ್ನು ಕಂಡು ಭಕ್ತರು ಭಾವಪರವಶರಾದರು. ಈ ಹಿಂದಿನ ಬ್ರಹ್ಮಕಲಶೋತ್ಸವ ಸಮಯದಲ್ಲೂ ದೇವಾಲಯದಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗನ ಇರುವಿಕೆಯನ್ನು ಗೋಚರಿಸಿರುವುದನ್ನು ಸ್ಮರಿಸಬಹುದು.

ಪದಾಳ ಕ್ಷೇತ್ರದಲ್ಲಿ ಇಂದು: ಬ್ರಹ್ಮಕಲಶೋತ್ಸವದ 4 ನೇ ದಿನ ಡಿ. 21 ರಂದು ಬೆಳಗ್ಗೆ 5 ರಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಕ್ಕೆ ತ್ರಿಕಾಲ ಪೂಜೆ, ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ದೀಪಾರಾಧನೆ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಪ್ರಸಾದ ಭೋಜನ ನಡೆಯಲಿದೆ.

ಭಜನಾ ಸೇವೆ: ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಭಜನಾ ಸೇವೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಮಯೂರ ವೇದಿಕೆಯಲ್ಲಿ ಬೆಳಗ್ಗೆ 10 ರಿಂದ 11.30 ರವರೆಗೆ ತನ್ಮಯೀ ಉಪ್ಪಂಗಳ ಅವರಿಂದ ಶಾಸ್ತ್ರೀಯ ಸಂಗೀತ, ಮಾಣಿಯ ಧರಣಿ ಎಲ್. ಕೆ. ಮತ್ತು ಬಳಗದಿಂದ ಮಧ್ಯಾಹ್ನ 1 ರಿಂದ3 ರವರೆಗೆ ಭಕ್ತಿ ರಸಮಂಜರಿ, ಅಪರಾಹ್ನ 3 ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಕಾರ್ಯಕ್ರಮ, ಸಂಜೆ 5 ರಿಂದ 6.30 ರವರೆಗೆ ವೇಣುಗೋಪಾಲ್ ಪುತ್ತೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸ್ಯಾಕ್ಸೋಫೋನ್ ಕಛೇರಿ ನಡೆಯಲಿದೆ.

ರಾತ್ರಿ 7 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ದ. ಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ, ಮುಂಬೈಯ ಉದ್ಯಮಿ ಲಕ್ಷ್ಮಣ ಮಣಿಯಾಣಿ ಭಾಗವಹಿಸಲಿದ್ದಾರೆ. ರಾತ್ರಿ 8.30 ರಿಂದ ಮೂಲ್ಕಿ ನವವೈಭವ ಕಲಾವಿದರಿಂದ ‘ಸತ್ಯೊದ ತುಡರ್’ ಕಾರ್ಯಕ್ರಮ ನಡೆಯಲಿದೆ.

Exit mobile version