ಶಿಬರಾಜೆ: ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದಿಂದ ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರಮದಾನ ಡಿ. 18 ರಂದು ನಡೆಯಿತು. 2025 ಜನವರಿ ತಿಂಗಳಿನಲ್ಲಿ ನಡೆಯುವ ಅರ್ಧ ಏಕಾಹ ಭಜನೆ ಪ್ರಯುಕ್ತ ಸ್ವಚ್ಛತೆಯನ್ನು ನಡೆಸಿ ದೇವಸ್ಥಾನದ ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ಮಣ್ಣನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸೀಮುಳ್ಳು ದಿನೇಶ್ ಗೌಡ ಉಪಸ್ಥಿತರಿದ್ದು ಸಹಕಾರ ನೀಡಿದರು. ಶೌರ್ಯ ವಿಪತ್ತು ತಂಡದ ಸದಸ್ಯರಾದ ಶೀನಪ್ಪ ನಾಯ್ಕ್, ಮುಚ್ಚಿರಡ್ಕಕುಶಾಲಪ್ಪ ಗೌಡ, ರಾಧಾಕೃಷ್ಣ ಗುತ್ತು, ಅವಿನಾಶ್ ಭಿಡೆ, ಸೋಮಶೇಖರ್, ಬೇಬಿ ಪೂಜಾರಿ, ರಶ್ಮಿತಾ, ರಮೇಶ ಬೈರಕಟ್ಟ, ಹರೀಶ್ ವಳಗುಡ್ಡೆ ಭಾಗವಹಿಸಿದ್ದರು.