ಉಜಿರೆ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪ್ರಗತಿಯಲ್ಲಿದ್ದು ಚಾಲಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವ ಪರಿಸ್ಥಿತಿ ಒದಗಿ ಬಂದರೂ, ಉಜಿರೆ ಅನುಗ್ರಹ ಶಾಲೆ ಹಾಗೂ ಸಂತ ಅಂತೋನಿ ಚರ್ಚ್ ಅನುಗ್ರಹ ಸಭಾ ಭವನ ಹೊಂದಿದ್ದರು ಶಾಲೆಯ ಒಟ್ಟು 1000 ಮಿಕ್ಕಿ ಮಕ್ಕಳನ್ನು ಹೊಂದಿದ್ದು ಶಾಲಾ ಮಕ್ಕಳಿಗೆ, ಪೋಷಕರು, ಶಾಲಾ ವಾಹನ ಚಾಲಕ ಮಾಲಕರು ತೀವ್ರ ತೊಂದರೆಗೆ ಹೊಳಗಾಗಿದ್ದಾರೆ.
ಇತ್ತ ಶಾಲಾ ಆವರಣದೊಳಗೆ ಹೋಗಲು ಸರಿಯಾದ ತಾತ್ಕಾಲಿಕ ರಸ್ತೆ ಗುತ್ತಿಗೆದಾರರು ಮಾಡಿ ಕೊಡದೆ ತೊಂದರೆ ಎದುರಿಸುವ ಪರಿಸ್ಥಿತಿ ಒದಗಿದೆ. ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಿಸುವಂತೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಾಲಾ ವಾಹನ ಚಾಲಕ ಮಾಲಕರು ವಿನಂತಿಸಿದ್ದಾರೆ.