ಬೆಳಾಲು: ದ ಕ ಜಿ ಪಂ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ ಇಲ್ಲಿ ಪ್ರತಿಭಾ ದಿನಾಚರಣೆಯನ್ನು ಡಿ. 14ರಂದು ಆಚರಿಸಲಾಯಿತು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಇಲ್ಲಿನ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಸಂಚಾಲಕರಾದ ಮೋಹನ್ ಕುಮಾರ್ ಲಕ್ಷ್ಮಿ ಗ್ರೂಪ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಇನ್ವರ್ಟರ್ ದಾನಿಗಳಾದ ಜಯಣ್ಣ ಗೌಡ ಮಿನಂದೇಲು, ಪ್ರಿಂಟರ್ ದಾನಿಗಳಾದ ನೀಲಯ್ಯ ಗೌಡ ಭೀಮಂಡೆ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಏಳ್ಳುಗದ್ದೆ, ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿಗಳಾದ ಟಿ ಬಿ ಬಸವಲಿಂಗಪ್ಪ, ಊರ ಹಿರಿಯರಾದ ಬಾಬು ಗೌಡ ಅಲಕೆದಡ್ಡ, ಡೊಂಬಯ್ಯ ಗೌಡ ಕಾವಟೆ, ಬಾಲಚಂದ್ರ ಹೊಳ್ಳ, ಲೋಕಯ್ಯ ಗೌಡ ಗುಂಡಿಹಿತ್ಲು, ಚಿತ್ತಾರ ಯುವ ಶಕ್ತಿ ಗೆಳೆಯರ ಬಳಗದ ಅಧ್ಯಕ್ಷರಾದ ಸುರೇಶ್ ಇರಂಬಿತ್ತಿಲು, ವಿವೇಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಅರಣೆಮಾರು, ಪ್ರತಿಭಾ ದಿನಾಚರಣೆ ಸಮಿತಿಯ ಅಧ್ಯಕ್ಷರಾದ ಸಂತೋಷ ಮಡಿವಾಳ, SDMC ಅಧ್ಯಕ್ಷರಾದ ಪ್ರಸಾದ್ ಗೌಡ ಭಾಗವಹಿಸಿದರು.
ಶಾಲಾ ಮುಖ್ಯ ಶಿಕ್ಷಕಿ ವಿಜಯಾ ಸ್ವಾಗತಿಸಿ, ಜ್ಞಾನ ದೀಪ ಶಿಕ್ಷಕಿ ದಿವ್ಯಶ್ರೀ ವರದಿ ವಾಚಿಸಿ, ಸಹಶಿಕ್ಷಕಿ ಜಯಶ್ರೀ ಬಿ ಕೆ ವಂದಿಸಿದರು. ಅತಿಥಿಗಳನ್ನು ದಾನಿಗಳನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಕಲಿಕೆ, ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಹಶಿಕ್ಷಕಿ ಜಯಶ್ರೀ ಹಾಗೂ ಜ್ಞಾನ ದೀಪ ಶಿಕ್ಷಕಿ ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಥಳೀಯ ಅಂಗನವಾಡಿ ವಿದ್ಯಾರ್ಥಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಮತ್ತು ಪೌರಾಣಿಕ ನಾಟಕ ಭಕ್ತ ಪ್ರಹ್ಲಾದ ಪ್ರದರ್ಶನಗೊಂಡಿತು.