ಧರ್ಮಸ್ಥಳ: 60-65 ವರ್ಷ ಪ್ರಾಯದ ಅಪರಿಚಿತ ಹೆಂಗಸು ಡಿ.18ರಂದು ಧರ್ಮಸ್ಥಳದ ನರ್ಮದಾ ವಸತಿ ಗೃಹದ ಮೆಟ್ಟಿಲ ಮೇಲೆ ಕುಳಿತು ಹಿಂದಕ್ಕೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟು ಪತ್ತೆಯಾಗಿದ್ದು, ಮೃತದೇಹವನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶವಗಾರದಲ್ಲಿ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ. ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆ: 8277986447 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು: 9480805336 ನಂಬರಿಗೆ ಮಾಹಿತಿ ನೀಡುವುದು.