Site icon Suddi Belthangady

ಬದ್ಯಾರು ಕಟ್ಟೆ ನಿವಾಸಿ ಸ್ಟೀಫನ್ ಡಿಸೋಜಾ ವಿದ್ಯುತ್ ಅವಘಡದಿಂದ ಮೃತ್ಯು

ಬೆಳ್ತಂಗಡಿ: ಮನೆಯಲ್ಲಿ ಕ್ರಿಸ್ ಮಸ್ ಹಬ್ಬಕ್ಕಾಗಿ ಡಿ. 19 ರಂದು ಬೆಳಗ್ಗೆ ಲೈಟಿಂಗ್ ಮಾಡಲು ವೈಯ‌ರ್ ಗಳನ್ನು ಜೋಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ವರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ತೆಂಕಕಾರಂದೂರು ಗ್ರಾಮದ ಪೇರೋಡಿತ್ತಾಯ ಕಟ್ಟೆಯ ನಿವಾಸಿ ಸ್ಟೀಫನ್(14 ವ) ಎಂಬಾತ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಈತ ಬೆಳ್ತಂಗಡಿ ಸೈಂಟ್ ತೆರೆಸಾ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version